ಧಾರವಾಡ: ಲಾಕ್‍ಡೌನ್ ಹಿನ್ನೆಲೆ ಮದ್ಯ ಸಿಗದಕ್ಕೆ ಕಂಗಾಲಾದ ಮದ್ಯವ್ಯಸನಿಯೊಬ್ಬ ಸ್ಯಾನಿಟೈಜರ್ ಕುಡಿದು ಆಸ್ಪತ್ರೆ ಸೇರಿದ ಘಟನೆ ಧಾರವಾಡದಲ್ಲಿ ನಡೆದಿದೆ.ಧಾರವಾಡದ ಗಾಂಧಿಚೌಕ್ ಬಾಲಾಜಿ ಓಣಿ ನಿವಾಸಿ ದೀಪಕ್ ಶಿಂಧೆ ಸ್ಯಾನಿಟೈಜರ್ ಕುಡಿದು ಆಸ್ಪತ್ರೆ ಸೇರಿದ್ದಾನೆ. ಈತ ಮದ್ಯ ವ್ಯಸನಿಯಾಗಿದ್ದು, ಕುಡಿಯಲು ಮದ್ಯ ಸಿಗದಕ್ಕೆ ತನ್ನ ಕೈಗೆ ಸಿಕ್ಕ ಸ್ಯಾನಿಟೈಜರ್ ಗಳನ್ನೇ ಕುಡಿದು ಬಿಟ್ಟಿದ್ದಾನೆ. ಸ್ಯಾನಿಟೈಜರ್ ಕುಡಿದ ತಕ್ಷಣವೇ ಈತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಶಹರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಈ ಹಿಂದೆ ಮದ್ಯ ಸಿಗದ್ದಕ್ಕೆ ಸ್ಯಾನಿಟೈಸರ್ ಕುಡಿದು ಒಂದೇ ದಿನ ಅಕ್ಕ-ತಮ್ಮ ಮೃತಪಟ್ಟಿದ್ದರು. ಗಂಬ್ಯಾಪುರ ಗ್ರಾಮದ ನಿವಾಸಿ ಬಸವರಾಜ್ ಕುರುವಿನಕೊಪ್ಪ(45) ಭಾನುವಾರ ಬೆಳಗ್ಗೆ ಸಾವನ್ನಪ್ಪಿದ್ದರೆ, ಸಂಜೆ ಹೊತ್ತಿಗೆ ಮೃತನ ಸಹೋದರಿ ಜಂಬಕ್ಕ ಕಟ್ಟಿಮನಿ(47) ಸಹ ಮೃತಪಟ್ಟಿದ್ದಳು. ಲಾಕ್‍ಡೌನ್ ಇದ್ದ ಕಾರಣ ಇವರಿಗೆ ಮದ್ಯ ಸಿಕ್ಕಿರಲಿಲ್ಲ. ಮದ್ಯ ವ್ಯಸನಿಗಳಾಗಿದ್ದ ಇವರು ಕಳೆದ ಒಂದು ತಿಂಗಳಿಂದ ಮದ್ಯ ಸೇವಿಸಿರಲಿಲ್ಲ. ಹೀಗಾಗಿ ಸ್ಯಾನಿಟೈಜರ್ ಕುಡಿದ ಪರಿಣಾಮ ಸಾವನ್ನಪ್ಪಿದ್ದರು.Sign in to your account
Username or Email Address


Password

 Remember Me


