ರಾಯಚೂರು: ಜಿಲ್ಲೆಯ ಸಿಂಧನೂರಿನ ಉಮಲೂಟಿ ಬಳಿ ಲಾರಿ ಗಾಲಿಗೆ ಸಿಲುಕಿ ಚಿಕ್ಕ ಮಗು ಮತ್ತು ಗರ್ಭಿಣಿ ಸೇರಿ ಮೂವರು ಸಾವನ್ನಪ್ಪಿದ್ದಾರೆ.ಮೃತರನ್ನು ಚಿಕ್ಕಬೇರ್ಗಿಯ ಪರಸಣ್ಣ, ಕನಕಮ್ಮ ದಂಪತಿ ಹಾಗೂ ಅವರ ಮಗಳು ನಾಗಮ್ಮ ಎಂದು ಗುರುತಿಸಲಾಗಿದೆ. ಗರ್ಭಿಣಿಯ ಚೆಕಪ್‍ಗಾಗಿ ಚಿಕ್ಕಬೇರ್ಗಿ ಗ್ರಾಮದಿಂದ ಮೊಪೆಡ್‍ನಲ್ಲಿ ಬಾಗಲಕೋಟೆಯ ಇಳಕಲ್ ಗೆ ಹೊರಟಿದ್ದವರಿಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಒಂದೂವರೆ ವರ್ಷದ ಮಗು ಹಾಗೂ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಗರ್ಭಿಣಿ ಆಸ್ಪತ್ರೆ ಹೋಗುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.ಪರಸಣ್ಣ ಹಾಗೂ ನಾಗಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡಿದ್ದ ಗರ್ಭಿಣಿ ಕನಕಮ್ಮ ಸಿಂಧನೂರು ತಾಲೂಕು ಆಸ್ಪತ್ರೆ ರವಾನಿಸುವಾಗ ಸಾವನ್ನಪ್ಪಿದ್ದಾರೆ. ಇಳಕಲ್ ಹತ್ತಿರವಾಗುತ್ತೆ ಎಂದು ಮೊಪೆಡ್ ನಲ್ಲೇ ಪತ್ನಿಯನ್ನು ಆಸ್ಪತ್ರೆಗೆ ಪರಸಣ್ಣ ಕರೆದೊಯ್ಯುತ್ತಿದ್ದ ವೇಳೆ ಅಪಘಾತವಾಗಿದೆ. ಘಟನೆ ಸಂಬಂಧ ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


