ಬೆಂಗಳೂರು: ಕೊರೊನಾ ಭೀತಿಯ ನಡುವೆಯೇ ಬೆಂಗಳೂರಿನ ಹೊಂಗಸಂದ್ರದಲ್ಲಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡಿ ಜನರಲ್ಲಿ ಮತ್ತಷ್ಟು ಭಯ ಹುಟ್ಟಿಸಿದ್ದಾನೆ.ಹೊಂಗಸಂದ್ರದ ಕೊರೊನಾ ಪೀಡಿತ ಪ್ರದೇಶ ವಿದ್ಯಾಜ್ಯೋತಿ ನಗರದ ಸುತ್ತಮುತ್ತ ವ್ಯಕ್ತಿ ಓಡಾಟ ನಡೆಸುತ್ತಿದ್ದಾನೆ. ಅಲ್ಲಿ ಈಗಾಗಲೇ 9 ಜನರಿಗೆ ಪಾಸಿಟಿವ್ ಬಂದಿದ್ದು, ಪರಿಣಾಮ ಹೊಂಗಸಂದ್ರ ಸಂಪೂರ್ಣ ಸೀಲ್ ಡೌನ್ ಆಗಿದೆ. ಇದರ ಮಧ್ಯೆ ಈತನ ವರ್ತನೆ ಕಂಡು ಹೊಂಸಂದ್ರದ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ.ಈ ಅನುಮಾನಸ್ಪದ ವ್ಯಕ್ತಿ ಉಗುಳುವುದು, ಮನೆಗಳ ಮುಂದೆ, ಅಂಗಡಿಗಳ ಮುಂದೆ ಮಲಗುವುದು, ಮನೆಗಳಿಗೆ ಕಲ್ಲು ಎಸೆಯುವುದು ಮಾಡ್ತಿದ್ದಾನೆ. ಮನೆಗಳ ಮುಂದೆ ಮಲಗುವುದು, ಉಗುಳುವುದನ್ನು ಕಂಡು ಬೈದು ಕಳಿಸುವ ಪ್ರಯತ್ನ ಮಾಡಿದ್ರು ಜನ ವಿಫಲರಾಗಿದ್ದಾರೆ.ಒಟ್ಟಿನಲ್ಲಿ ಕೊರೊನಾ ಭೀತಿ ನಡುವೆ ಈತನಿಗೂ ಕೊರೊನಾ ಇದೆಯಾ ಎಂಬ ಭಯ ಅಲ್ಲಿನ ಜನರಲ್ಲಿ ಮೂಡಿದೆ. ಬಿಹಾರಿ ಕೂಲಿ ಕಾರ್ಮಿಕ ಇರುವ ಏರಿಯಾ ಸುತ್ತಮುತ್ತ ಓಡಾಟ ನಡೆಸುತ್ತಿದ್ದು, ಈತನ ವರ್ತನೆ, ಓಡಾಟದ ಬಗ್ಗೆ ಬಿಬಿಎಂಪಿ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.Sign in to your account
Username or Email Address


Password

 Remember Me


