ಧಾರವಾಡ: ಧಾರವಾಡದಲ್ಲಿ ಮೂರು ವರ್ಷದ ಬಾಲಕನೋರ್ವ ತನ್ನ ಹುಟ್ಟುಹಬ್ಬಕ್ಕೆ ಎಂದು ಹುಂಡಿಯಲ್ಲಿ ಕೂಡಿಟ್ಟಿದ್ದ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ಮೂರು ವರ್ಷದ ಬಾಲಕ ಸಂಸ್ಕೃತ ಹೂಗಾರ ತನ್ನ ಹುಂಡಿಯಲ್ಲಿನ ಹಣವನ್ನು ಸಿಎಂ ಕೊರೊನಾ ಪರಿಹಾರ ನಿಧಿಗೆ ನೀಡಿದ್ದಾನೆ. ವರ್ಷವಿಡೀ ಕೂಡಿಟ್ಟ 508 ರೂ. ಗಳವನ್ನು ಈತ ತನ್ನೂರಿಗೆ ಆಗಮಿಸಿದ್ದ ತಹಶೀಲ್ದಾರ್ ಸಂತೋಷಕುಮಾರ್ ಬಿರಾದಾರರಿಗೆ ನೀಡಿದ್ದಾನೆ.ಈತನ ಕಾರ್ಯವೀಗ ಇತರರಿಗೆ ಮಾದರಿಯಾಗಿದೆ. ಪ್ರಕಾಶ್ ಮತ್ತು ಝಾಂನ್ಸಿ ಲಕ್ಷ್ಮಿ ದಂಪತಿಯ ಮಗ ಸಂಸ್ಕೃತನ ಈ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.Sign in to your account
Username or Email Address


Password

 Remember Me


