ಚಿಕ್ಕಮಗಳೂರು: ಮತಾಂಧ ಶಕ್ತಿಗಳು, ದುರಹಂಕಾರಿಗಳು, ದೇಶದ್ರೋಹಿಗಳು ಕೊರೊನ ವಾರಿವರ್ಸ್ ಮೇಲೆ ಹಲ್ಲೆ ನಡೆಸಿದ್ದು, ಅವರ ವಿರುದ್ಧ ಗೂಂಡಾ ಕಾಯ್ದೆ ಕೇಸ್ ದಾಖಲಿಸಿ, ಐದು ವರ್ಷ ಜೈಲಿನಲ್ಲಿಡಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.ನಗರದ ಜಿಲ್ಲಾಸ್ಪತ್ರೆಯಲ್ಲಿ ಹಲ್ಲೆಗೊಳಗಾಗಿದ್ದ ಪೌರಕಾರ್ಮಿಕರನ್ನು ಭೇಟಿ ಮಾಡಿದ ಶೋಭಾ, ಹಲ್ಲೆಗೊಳಗಾದವರ ಆರೋಗ್ಯ ವಿಚಾರಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಇತ್ತೀಚೆಗೆ ಬೆಂಗಳೂರು, ಇಂದು ಚಿಕ್ಕಮಗಳೂರು ಹೀಗೆ ಒಂದರ ಮೇಲೆ ಒಂದರಂತೆ ಕೊರೊನಾ ವಾರಿವರ್ಸ್ ಮೇಲೆ ಹಲ್ಲೆ ನಡೆಯುತ್ತಲೇ ಇದೆ. ಹಲ್ಲೆ ಮಾಡಿದವರು ಐದು ವರ್ಷ ಜೈಲಿನಿಂದ ಹೊರಬರದಂತೆ ಸರ್ಕಾರ ಕ್ರಮಕೈಗೊಳ್ಳಬೇಕು ಹಲ್ಲೆ ಮಾಡಿದವರ ಸಂಪೂರ್ಣ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದರು.ಕೊರೊನಾದಿಂದ ಸಾವನ್ನಪ್ಪಿದವರ ಶವ ಸಂಸ್ಕಾರದಲ್ಲಿ ಜಮೀರ್ ಅಹಮದ್ ಭಾಗಿಯಾಗಿದ್ದಾರೆ. ತಕ್ಷಣ ಅವರನ್ನು ಕ್ವಾರೆಂಟೈನ್‍ನಲ್ಲಿ ಇಡಬೇಕು. ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆಯನ್ನೂ ಅವರು ಸಮರ್ಥಿಸಿಕೊಂಡಿದ್ದಾರೆ. ಅವರನ್ನು ಗೃಹಬಂಧನದಲ್ಲಿಡಬೇಕು, ಹಲ್ಲೆ ಮಾಡಿದವರ ಮೇಲೆ ಯಾವ ಪ್ರಕರಣ ಹಾಕುತ್ತಾರೋ, ಪ್ರಚೋದಿಸಿದವರ ಮೇಲೂ ಅದೇ ಕೇಸ್ ಹಾಕಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.ಬೆಂಗಳೂರು, ಮಂಡ್ಯ, ಗದಗ ಬೆಳಗಾವಿಯಲ್ಲಿ ತಬ್ಲೀಘಿಗೆ ಹೋದವರು ಇದ್ದಾರೆ, ಬೆಳಗಾವಿಯಲ್ಲಿ 70 ಜನ ನೇರವಾಗಿ ಅಲ್ಲಿಗೆ ಹೋದವರು ಸಿಕ್ಕಿದ್ದಾರೆ. ಅವರು ನಮ್ಮ ದೇಶದ ಪ್ರಜೆಗಳಂತೆ ನಡೆದುಕೊಳ್ಳುತ್ತಿಲ್ಲ. ಕೊರೊನಾವನ್ನು ಉಳಿದವರಿಗೂ ಹಬ್ಬಿಸಬೇಕು ಎನ್ನುವ ವ್ಯವಸ್ಥಿತ ಪಿತೂರಿ ನಡೆಸಿದ್ದಾರೆ, ಇದು ಜಿಹಾದಿ, ಭಯೋತ್ಪಾದಕರ ಮುಂದುವರೆದ ಭಾಗ. ಹಲವಾರು ಜನ ಕ್ವಾರಂಟೈನ್‍ಗೆ ಬಂದಿಲ್ಲ, ಆಸ್ಪತ್ರೆಗೂ ಹೋಗಿಲ್ಲ, ಪೊಲೀಸರಿಗೂ ಮಾಹಿತಿ ನೀಡಿಲ್ಲ ಹಾಗಾಗಿ ಸರ್ಕಾರ ಜಾಗೃತವಹಿಸಿ ಅವರೆನ್ನೆಲ್ಲ ಕ್ವಾರಂಟೈನ್‍ನಲ್ಲಿ ಇಡಬೇಕು ಎಂದರು.Sign in to your account
Username or Email Address


Password

 Remember Me


