ಹುಬ್ಬಳ್ಳಿ: ಕೊರೊನಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಮರಿಪೇಟೆ ಪೊಲೀಸ್ ಠಾಣೆಯನ್ನು ಸ್ಥಳಾಂತರಿಸಲಾಗಿದೆ.ನಗರದ ಮುಲ್ಲಾ ಮತ್ತು ಕರಾಡಿ ಓಣಿಯಲ್ಲಿ ಒಟ್ಟು 6 ಜನರಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಇದೀಗ ಮುಂಜಾಗ್ರತ ಕ್ರಮವಾಗಿ ಈ ಭಾಗದ ಕಮರಿಪೇಟೆಯ ಪೊಲೀಸ್ ಠಾಣೆಯನ್ನು ಚರ್ಚ್ ವೊಂದರ ಸಭಾಭವನಕ್ಕೆ ಸ್ಥಳಾಂತರಿಸಲಾಗಿದೆ. ಕಮರಿಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯು ಕಂಟೈನ್‍ಮೆಂಟ್ ಪ್ರದೇಶವಾಗಿದ್ದು, ಸಿಬ್ಬಂದಿ ಹಾಗೂ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಠಾಣೆಯನ್ನ ಶಿಫ್ಟ್ ಮಾಡಲಾಗಿದೆ.ಮುಲ್ಲಾ ಮತ್ತು ಕರಾಡಿ ಓಣಿಯ ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ರವಾನಿಸುವಾಗ ಕರ್ತವ್ಯದಲ್ಲಿದ್ದ ಐವರು ಪೊಲೀಸರಿಗೆ ಕೊರೊನಾ ಭೀತಿ ಎದುರಾಗಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಐವರು ಪೊಲೀಸರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಹಾಗಾಗಿ ಜನರು ಕಮರಿಪೇಟೆಯ ಪೊಲೀಸ್ ಠಾಣೆಗೆ ಬರಲು ಸಾರ್ವಜನಿಕರು ಆತಂಕ ಎದುರಾಗಿತ್ತು.Sign in to your account
Username or Email Address


Password

 Remember Me


