ಮಂಡ್ಯ: ಕೆಪಿಸಿಸಿ ಮಾಧ್ಯಮ ವಿಭಾಗದ ಉಸ್ತುವಾರಿ ರವಿ ಅವರು ತಮ್ಮ ಅಕ್ಕನ ಮಗಳನ್ನು ಇಂದು ವಿವಾಹವಾಗಿದ್ದಾರೆ.ರವಿ ಅವರ ಹುಟ್ಟೂರಾದ ಮದ್ದೂರಿನ ಹೂತಗೆರೆ ಗ್ರಾಮದ ತಿಮ್ಮಪ್ಪನ ಗುಡಿಯಲ್ಲಿ ಕೆಲವೇ ಸದಸ್ಯರ ಸಮ್ಮುಖದಲ್ಲಿ ಸರಳ ಮದುವೆ ನಡೆದಿದೆ. ಸರ್ಕಾರದ ಸಾಮಾಜಿಕ ಅಂತರದ ಎಲ್ಲಾ ನಿಯಮಗಳನ್ನ ಪಾಲಿಸಿ ಅನುಷಾ ಮತ್ತು ರವಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಯುವ ಕಾಂಗ್ರೆಸ್ ಮುಖಂಡ ಗುಟ್ಟಹಳ್ಳಿ ರವಿ, ಕಾಂಗ್ರೆಸ್ ವಿದ್ಯಾರ್ಥಿ ಘಟಕದ ಅಧ್ಯಕ್ಷ ಹೆಚ್.ಎಸ್. ಮಂಜುನಾಥ್ ಗೌಡ ಸೇರಿದಂತೆ ಬಂದಿದ್ದ ಅತಿಥಿಗಳು ಜೋಡಿಯನ್ನು ಹರಸಿದರು.ಬೆಂಗಳೂರಿನ ರಾಜರಾಜೇಶ್ವರಿ ನಗರದ ಕಲ್ಯಾಣ ಮಂಟಪವೊಂದರಲ್ಲಿ ಅನುಷಾ ಮತ್ತು ರವಿ ಅವರ ವಿವಾಹವನ್ನು ನಡೆಸಲು ಬಹಳ ಹಿಂದೆಯೇ ನಿಶ್ಚಯಿಸಲಾಗಿತ್ತು. ಈ ಮಧ್ಯೆ ಕೊರೊನಾ ವೈರಸ್ ನಿಂದಾಗಿ ದೇಶಾದ್ಯಂತ ಲಾಕ್‍ಡೌನ್ ಘೋಷಣೆಯಾದ ಪರಿಣಾಮ ಸ್ವಗ್ರಾಮದ ದೇವಾಲಯದಲ್ಲಿ ಸರಳವಾಗಿ ಮದುವೆ ನಡೆದಿದೆ.Sign in to your account
Username or Email Address


Password

 Remember Me


