ಚಿಕ್ಕಬಳ್ಳಾಪುರ: ಜಿಲ್ಲೆಯ ಕೊರೊನಾ ಸೋಂಕಿತ 40 ವರ್ಷದ ಮಹಿಳೆ ರೋಗಿ ನಂ.94 ಇಂದು ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಮಾಹಿತಿ ನೀಡಿದ್ದಾರೆ.ಗೌರಿಬಿದನೂರು ನಗರ ನಿವಾಸಿ, 31 ವರ್ಷದ ವ್ಯಕ್ತಿ ಮೆಕ್ಕಾದಿಂದ ವಾಪಸ್ಸಾಗಿದ್ದು, ಈತನ ಮನೆಯಲ್ಲಿ ತಾಯಿ, ತಂದೆ ಇಬ್ಬರು ಸಹೋದರಿಯರಿಗೂ ಸೋಂಕು ತಗುಲಿತ್ತು. ಈಗಾಗಲೇ ತಂದೆ, ತಾಯಿ ಹಾಗೂ 31 ವರ್ಷದ ವ್ಯಕ್ತಿ ಡಿಸ್ಚಾರ್ಜ್ ಆಗಿದ್ದಾರೆ. ಇದೀಗ 31 ವರ್ಷದ ವ್ಯಕ್ತಿಯ ಅಕ್ಕ 40 ವರ್ಷದ ಮಹಿಳೆ ರಾಜೀವ್ ಗಾಂಧಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.ಈ ಮಹಿಳೆಯ ಅಕ್ಕ ಸಹ ಸೋಂಕಿತಳಾಗಿದ್ದು, ಆಕೆ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸದ್ಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 16 ಮಂದಿ ಸೋಂಕಿಗೆ ಒಳಗಾಗಿದ್ದು, ಅವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇದುವರೆಗೂ 9 ಮಂದಿ ಡಿಸ್ಚಾರ್ಜ್ ಆಗಿದ್ದಾರೆ, ಉಳಿದ 05 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.Sign in to your account
Username or Email Address


Password

 Remember Me


