ಬೆಂಗಳೂರು: ನಗರದ ಪಾದರಾಯನಪುರದಲ್ಲಿ ಭಾನುವಾರ ರಾತ್ರಿ ಕೆಲ ಪುಂಡರು ಗಲಭೆ ನಡೆಸಿದ ಸಂಬಂಧ ಇದೀಗ ಏರಿಯಾಗೆ ಗರುಡ ಟೀಂ ಎಂಟ್ರಿ ಕೊಟ್ಟಿದೆ. ಈ ಮೂಲಕ ಇನ್ಮುಂದೆ ಪಾದರಾಯನಪುರದಲ್ಲಿ ಯಾರೂ ಮಿಸುಕಾಡುವಂಗಿಲ್ಲ.ರೈಫಲ್ ಹಿಡಿದುಕೊಂಡು ಗರುಡ ಕಮಾಂಡೋಗಳು ನಡು ರಸ್ತೆಯಲ್ಲಿ ನಿಂತುಕೊಳ್ಳುತ್ತಾರೆ. ಮಾಸ್ಕ್ ಹಾಕದೆ, ಹೊರಗಡೆ ಓಡಾಡುವ ಜನರಿಗೆ ಫುಲ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಗರುಡ ಟೀಮ್ ನೋಡಿ ಜನ ಮನೆಯಿಂದ ಹೊರಬರಲು ಭಯಪಟ್ಟಿದ್ದಾರೆ.ಇತ್ತ ಪೊಲೀಸರು ಕೂಡ ಪ್ರತಿ ಏರಿಯಾದಲ್ಲೂ ಗಸ್ತು ತಿರುಗುತ್ತಿದ್ದಾರೆ. ಬೈಕ್‍ಗಳಲ್ಲಿ, ಜೀಪ್‍ನಲ್ಲಿ ಪೊಲೀಸರು ಸುತ್ತಾಡುತ್ತಿದ್ದಾರೆ. ಪ್ರತಿ ಗಲ್ಲಿ ಗಲ್ಲಿಗೂ ಪೊಲೀಸ್ ಸರ್ಪಗಾವಲು ಇರಿಸಲಾಗಿದೆ. ಒಟ್ಟಿನಲ್ಲಿ ಸದ್ಯ ಪಾದರಾಯನಪುರ ಸಂಪೂರ್ಣ ಖಾಕಿ ಮಯವಾಗಿದೆ.ಕ್ವಾರಂಟೈನ್ ಮಾಡಬೇಕಾಗಿದ್ದರೂ ನಾಪತ್ತೆಯಾಗಿದ್ದಾರೆ. 58 ಜನರ ಪೈಕಿ 33 ಜನರ ಕ್ವಾರಂಟೈನ್ ಮಾಡಬೇಕಿತ್ತು. 33 ಜನರಲ್ಲಿ ಸಾಕಷ್ಟು ಜನ ನಾಪತ್ತೆಯಾಗಿದ್ದಾರೆ. ಪೊಲೀಸರು ಹುಡುಕುವಂತಿಲ್ಲ. ಆರೋಗ್ಯ ಅಧಿಕಾರಿಗಳು ಬರುತ್ತಿಲ್ಲ. ಈಗ ಇಡೀ ಏರಿಯಾಕ್ಕೆ ಏರಿಯಾವೇ ಭಯದ ವಾತಾವರಣ ನಿರ್ಮಾಣವಾಗಿದೆ. ಮೃತ ಮಹಿಳೆಯ ಜನ ಸೆಕೆಂಡರಿ ಕಾಂಟ್ಯಾಕ್ಟ್ ಅಲ್ಲಿ ಇದ್ದ ಜನ ನಾಪತ್ತೆಯಾಗಿ ಕೊರೊನಾ ಹಬ್ಬುವ ಭೀತಿ ಹೆಚ್ಚಾಗಿದೆ.ಸದ್ಯ ಭಾನುವಾರ ರಾತ್ರಿ ಗಲಭೆ ನಡೆಸಿದ ಪುಂಡರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.Sign in to your account
Username or Email Address


Password

 Remember Me


