ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ಕೆಲವು ಕಡೆ ಕಟ್ಟುನಿಟ್ಟಿನ ರೀತಿಯಲ್ಲಿ ಸೀಲ್‍ಡೌನ್ ಕೂಡ ಮಾಡಲಾಗಿದೆ. ಆದರೆ ಈ ಮಧ್ಯೆ ಯುವತಿಯರಿಬ್ಬರು ಕುಡಿದ ನಶೆಯಲ್ಲಿ ಕಾರನ್ನು ರ‍್ಯಾಶ್ ಆಗಿ ಚಾಲನೆ ಮಾಡಿಕೊಂಡು ಹೋಗಿರುವ ಘಟನೆ ನಡೆದಿದೆ.ಲೀಲಾ ಪ್ಯಾಲೇಸ್ ಚೆಕ್ ಪೋಸ್ಟ್ ಬಳಿ ಯುವತಿಯರು ಪುಂಡಾಟ ಮಾಡಿದ್ದಾರೆ. ಪೊಲೀಸರು ಲೀಲಾ ಪ್ಯಾಲೇಸ್ ಬಳಿ ವಾಹನಗಳ ತಪಾಸಣೆ ಮಾಡುತ್ತಿದ್ದರು. ಆಗ ನಶೆಯಲ್ಲಿದ್ದ ಯುವತಿಯರು ಕಾರನ್ನು ರ‍್ಯಾಶ್ ಡ್ರೈವಿಂಗ್ ಮಾಡಿಕೊಂಡು ಬಂದಿದ್ದಾರೆ. ಈ ವೇಳೆ ಇನ್ಸ್‌ಪೆಕ್ಟರ್ ಕಾರನ್ನು ಅಡ್ಡ ಹಾಕಿದ್ದಾರೆ. ಆದರೆ ಯುವತಿಯರು ಕಾರು ನಿಲ್ಲಿಸದೆ ಇನ್ಸ್‌ಪೆಕ್ಟರ್ ಮೇಲೆ ಕಾರು ಹತ್ತಿಸಲು ಯತ್ನಿಸಿದ್ದು, ಅಲ್ಲಿಂದ ಪರಾರಿಯಾಗಿದ್ದಾರೆ.ಚೆಕ್ ಪೋಸ್ಟ್‌ನಲ್ಲಿ ಯುವತಿಯರ ಪುಂಡಾಟ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ನಂತರ ಜೆ.ಬಿ ನಗರ ಪೊಲೀಸರು ಯುವತಿಯರ ಕಾರನ್ನು ಸುಮಾರು 1 ಕಿ.ಮೀ ದೂರ ಚೇಸ್ ಮಾಡಿ ಯುವತಿಯರನ್ನ ತಡೆದು ನಿಲ್ಲಿಸಿದ್ದಾರೆ. ಈ ವೇಳೆ ನಮ್ಮ ಹತ್ತಿರ ಪಾಸ್ ಇದೆ. ನಮಗೆ ಮೇಲಾಧಿಕಾರಿಗಳು ಗೊತ್ತು ಎಂದು ಆವಾಜ್ ಹಾಕಿದ್ದಾರೆ.ಅಷ್ಟೇ ಅಲ್ಲದೇ ಈ ವೇಳೆ ಸ್ಥಳದಲ್ಲಿದ್ದ ಯುವಕರು ಯುವತಿಯರನ್ನು ಪ್ರಶ್ನೆ ಮಾಡಿದ್ದಾರೆ. ಅವರ ಬಳಿಯೂ ಯುವತಿಯರು ವಾಗ್ವಾದ ಮಾಡಿದ್ದಾರೆ. ನಂತರ ಸಾಧ್ಯವಾದರೆ ನಮ್ಮನ್ನು ಹಿಡಿಯಿರಿ ಎಂದು ಮತ್ತೆ ಸ್ಥಳದಿಂದ ಕಾರಿನಲ್ಲಿ ಯುವತಿಯರು ಪರಾರಿಯಾಗಿದ್ದಾರೆ. ಇದೀಗ ಪೊಲೀಸರ ತಂಡವೊಂದು ಯುವತಿಯರ ಕಾರ್ ನಂಬರ್ ಮೂಲಕ ಅವರನ್ನು ಪತ್ತೆಮಾಡಲು ಶೋಧಕಾರ್ಯ ನಡೆಸುತ್ತಿದ್ದಾರೆ.Sign in to your account
Username or Email Address


Password

 Remember Me


