ತುಮಕೂರು: ಲಾಕ್‍ಡೌನ್ ನಿಂದ ಇಡೀ ದೇಶವೇ ಲಾಕ್ ಆಗಿದ್ದರೂ ವಿವಿಧ ಗಡಿಗಳಿಂದ ಕರ್ನಾಟಕಕ್ಕೆ ಬರುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.ಅದರಲ್ಲೂ ಆಂಧ್ರ ಪ್ರದೇಶದ ಗಡಿಯಿಂದ ತುಮಕೂರು ಜಿಲ್ಲೆಯ ಪಾವಗಡದ ಮೂಲಕ ಪೊಲೀಸರ ಕಣ್ಣು ತಪ್ಪಿಸಿ ನುಸುಳಿಕೊಂಡು ಜನರು ಕರ್ನಾಟಕಕ್ಕೆ ಬರುತ್ತಿದ್ದಾರೆ. ಆಂಧ್ರಪ್ರದೇಶದಲ್ಲಿ ಸೋಂಕು ಹೆಚ್ಚಾದ ಕಾರಣ ಅಲ್ಲಿಂದ ಕರ್ನಾಟಕಕ್ಕೆ ಜನರು ಬರುತ್ತಿದ್ದಾರೆ.ವೈ.ಎನ್.ಹೊಸಕೋಟೆ, ಭೀಮನಹಳ್ಳಿ, ದಳವಾಯಿಹಳ್ಳಿ, ಗೌಡತಿಮ್ಮನಹಳ್ಳಿ, ಜಾಲೋಡು, ಮಾರಮ್ಮನಹಳ್ಳಿಯ ಮೂಲಕ ಆಂಧ್ರದಿಂದ ಜನರು ಆಗಮಿಸುತ್ತಿದ್ದಾರೆ. ಪರಿಣಾಮ ಪಾವಗಡ ತಾಲೂಕಿನ ಜನರಲ್ಲಿ ಆತಂಕ ಮನೆಮಾಡಿದೆ. ಪೊಲೀಸ್ ಇಲಾಖೆ ಟ್ರಂಚ್ ಹೊಡೆಸಿ, ಬೇಲಿ ಹಾಕಿದ್ದರೂ ನುಸುಳುಕೋರರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ.Sign in to your account
Username or Email Address


Password

 Remember Me


