ಕಾರವಾರ: ಲಾಕ್‍ಡೌನ್‍ನಿಂದ ಮದ್ಯ ಮಾರಾಟ ಸಹ ಬಂದ್ ಆಗಿದೆ. ಇದರಿಂದ ಮದ್ಯ ಪ್ರಿಯರಿಗಂತೂ ನುಂಗಲಾರದ ತುತ್ತಾಗಿದೆ. ಇದರಿಂದ ಮದ್ಯಕ್ಕಾಗಿ ಪಟ್ಟಣದ ವೈನ್ ಶಾಪ್ ಒಂದಕ್ಕೆ ಕಳ್ಳರು ಕನ್ನ ಹಾಕಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.ಕುಮಟಾ ಪಟ್ಟಣದ ಎಪಿಎಂಸಿ ಬಳಿ ಇರುವ ಅಲ್ಫಾ ವೈನ್ ಶಾಪ್‍ನಲ್ಲಿ ಕಳ್ಳತನ ಮಾಡಲಾಗಿದೆ. ವೈನ್ ಶಾಪ್‍ನ ಶಟರ್ ಒಡೆದು ಕಳ್ಳತನ ಮಾಡಲಾಗಿದೆ. ಒಟ್ಟು 43,665 ರೂಪಾಯಿ ಮೌಲ್ಯದ ವಿವಿಧ ಬ್ರಾಂಡ್ ಮದ್ಯಗಳನ್ನ ಕಳ್ಳರು ಕದ್ದು ಪರಾರಿಯಾಗಿದ್ದಾರೆ.ಅಂಗಡಿ ಮಾಲೀಕ ಅಂಗಡಿ ಬಳಿ ಬಂದು ನೋಡಿದಾಗ ಶಟರ್ ಮೇಲಕ್ಕೆ ಎತ್ತಿರುವುದು ಕಂಡು ಬಂದಿದ್ದು, ತಕ್ಷಣ ಈ ಸಂಬಂಧ ಕುಮಟಾ ಪೊಲೀಸರಿಗೆ ದೂರು ನೀಡಿದ್ದಾರೆ. ಮದ್ಯಕ್ಕಾಗಿ ಪರದಾಟ ನಡೆಸುತ್ತಿರುವುವರೇ ಕಳ್ಳತನ ಮಾಡಿರಬಹುದು ಎಂದು ಶಂಕಿಸಿದ್ದು, ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


