ಧಾರವಾಡ: ಶುಕ್ರವಾರ ರಾತ್ರಿ ಸುರಿದ ಮಳೆ-ಗಾಳೆಯಿಂದ ಮನೆ ಮೇಲೆ ಬಿದ್ದಿದ್ದ ತೆಂಗಿನ ಮರದ ಗರಿ ತೆಗೆಯಲು ಹೋದ ವೃದ್ಧೆಯೊಬ್ಬರು ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ನಡೆದಿದೆ.ಸಪ್ತಾಪುರ 8ನೇ ಕ್ರಾಸ್‍ನಲ್ಲೇ ಈ ಘಟನೆ ನಡೆದಿದ್ದು, 65 ವರ್ಷದ ಸರೊಜಾ ಸಾಟೆ ಎಂಬವರೇ ಮೃತಪಟ್ಟವರು. ನಿನ್ನೆ ರಾತ್ರಿ ನಗರಾದ್ಯಂತ ಭಾರೀ ಗಾಳಿ ಬೀಸಿತ್ತು. ಇದರಿಂದ ಮನೆಗೆ ಹೊಂದಿಕೊಂಡಿದ್ದ ತೆಂಗಿನಮರದ ಗರಿಗಳು ಮನೆ ಮೇಲೆ ಬಿದ್ದಿದ್ದವು.ಇವುಗಳನ್ನು ತೆರವುಗೊಳಿಸಲು ಮುಂದಾದಾಗ ಆಯತಪ್ಪಿ ಕೆಳಗೆ ಬಿದ್ದಾಗ ಪಕ್ಕದ ಮನೆಯ ಕಾಂಪೌಂಡ್ ಗೇಟ್‍ಗೆ ಬಡಿದು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮನೆಯಲ್ಲಿ ಇವರೊಬ್ಬರೇ ವಾಸಿಸ್ತಾ ಇದ್ದು, ಇದ್ದೊಬ್ಬ ಮಗಳು ಮೈಸೂರಿನಲ್ಲಿದ್ದಾರೆ. ಮೈಸೂರಿನಿಂದ ಮಗಳು ಬಂದ ಬಳಿಕ ಅಂತ್ಯಕ್ರಿಯೆ ನಡೆಯಲಿದೆ.ಈ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


