ಬೆಂಗಳೂರು: ಕೊರೊನಾ ಲಾಕ್‍ಡೌನ್ ನಡುವೆಯೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಿಗೆ ಅವರ ಅಭಿನಯದ ರಾಬರ್ಟ್ ಸಿನಿಮಾದಿಂದ ಸಿಹಿಸುದ್ದಿ ಹೊರಬಿದ್ದಿದೆ.ಹೌದು, ಎಲ್ಲ ಅಂದುಕೊಂಡತೆ ಆಗಿದ್ದರೆ ರಾಬರ್ಟ್ ಈ ತಿಂಗಳ ಕೊನೆಯಲ್ಲಿ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ವೈರಸ್ ಭೀತಿಯಿಂದ ದೇಶ ಲಾಕ್‍ಡೌನ್ ಆದ ಕಾರಣ ಚಿತ್ರದ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ. ಚಿತ್ರ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದ್ದರಿಂದ ಸಾಮಾನ್ಯವಾಗಿಯೇ ಡಿಬಾಸ್ ಅಭಿಮಾನಿಗಳಿಗೆ ಬಹಳ ಬೇಜಾರಗಿತ್ತು. ಈಗ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಹೊರಬಂದಿದೆ.ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದೆ. ಈಗ ಈ ಸಿನಿಮಾದ ಟಿವಿ ರೈಟ್ ಸೇಲ್ ಅಗಿದ್ದು, ಸನ್ ಟಿವಿ ನೆಟ್‍ವರ್ಕ್ ಅವರು ಬರೊಬ್ಬರಿ 8.2 ಕೋಟಿ ನೀಡಿ ರಾಬರ್ಟ್ ಅನ್ನು ಖರೀದಿಸಿದೆ. ಇದರ ಜೊತೆಗೆ ಅಮೆಜಾನ್ ಪ್ರೈಮ್ ಅವರು ಕೂಡ ರಾಬರ್ಟ್ ಚಿತ್ರವನ್ನು ಖರೀದಿ ಮಾಡಿದ್ದು, 5.5 ಕೋಟಿಗೆ ಸೇಲ್ ಅಗಿದೆ ಎಂದು ಟ್ವಿಟ್ಟರ್ ನಲ್ಲಿ ಸುದ್ದಿಯಾಗುತ್ತಿದೆ. ಆದರೆ ಈ ಬಗ್ಗೆ ಸಿನಿಮಾ ತಂಡ ಅಧಿಕೃತವಾಗಿ ಘೋಷಣೆ ಮಾಡಿಲ್ಲ.ಈಗಾಗಲೇ ಸಿನಿಮಾದ ಟೀಸರ್, ಹಾಡುಗಳು ರಿಲೀಸ್ ಆಗಿದ್ದು, ಯೂಟ್ಯೂಬ್‍ನಲ್ಲಿ ದಾಖಲೆಗಳನ್ನು ಬರೆದಿವೆ. ಚಿತ್ರತಂಡ ಮೂರು ಹಾಡುಗಳನ್ನು ರಿಲೀಸ್ ಮಾಡಿದೆ. ದೋಸ್ತಾ ಕಣೋ, ಬಾ ಬಾ ಬಾ ನಾ ರೆಡಿ, ಜೈ ಶ್ರೀರಾಮ್ ಹಾಡುಗಳು ಬಿಡುಗಡೆಗೊಂಡು ದಾಖಲೆಗಳನ್ನು ಬರೆದಿದ್ದು, ಅಭಿಮಾನಿಗಳು ಹುಚ್ಚೆಂದು ಕುಣಿಯುವಂತೆ ಮಾಡಿದ್ದವು. ಬಾ ಬಾ ಬಾ ನಾ ರೆಡಿ ಹಾಡು ಅತೀ ವೇಗವಾಗಿ 1 ಲಕ್ಷ ವೀವ್ಸ್ ಪಡೆಯುವ ಮೂಲಕ ಯೂಟ್ಯೂಬ್‍ನಲ್ಲಿ ಸಂಚಲನ ಸೃಷ್ಟಿಸಿತ್ತು.ಈ ಸಿನಿಮಾದಲ್ಲಿ ದರ್ಶನ್ ಅವರು ಸಂಜಯ್, ಅಕ್ಬರ್ ಹಾಗೂ ರಾಬರ್ಟ್ ಎಂಬ ಮೂರು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಶಾ ಭಟ್ ಸಿನಿಮಾದ ನಾಯಕಿಯಾಗಿದ್ದು, ಜಗಪತಿ ಬಾಬು ವಿಲನ್ ಆಗಿ ದರ್ಶನ್‍ಗೆ ಟಕ್ಕರ್ ಕೊಟ್ಟಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಸಿನಿಮಾದ ಆ್ಯಕ್ಷನ್ ಕಟ್ ಹೇಳಿದ್ದು, ಉಮಾಪತಿ ಬಂಡವಾಳ ಹಾಕಿದ್ದಾರೆ. ಅರ್ಜುನ್ ಜನ್ಯ ಸಂಗೀತ ಹಾಗೂ ಹಿನ್ನೆಲೆ ಸಂಗೀತ ನೀಡಿದ್ದಾರೆ.Sign in to your account
Username or Email Address


Password

 Remember Me


