ಮಡಿಕೇರಿ: ಪತ್ನಿಯನ್ನು ನೋಡಲು ತಮಿಳುನಾಡಿನಿಂದ ಬಂದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ಕೋವಿಡ್ ಕೇರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.ಮುತ್ತುವೀರನನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಲಾಕ್‍ಡೌನ್ ಇದ್ದರೂ, ತಾಯಿ ಮೃತಪಟ್ಟಿರುವುದಾಗಿ ಸುಳ್ಳು ಹೇಳಿ ತಮಿಳುನಾಡಿನಿಂದ ಕೊಡಗಿಗೆ ಪತ್ನಿಯನ್ನು ನೋಡಲು ಬಂದಿದ್ದಾನೆ. ಮಾರ್ಗ ಮಧ್ಯೆ ಎಲ್ಲ ಕಡೆಯೂ ಸುಳ್ಳು ಹೇಳಿ ಬಂದಿದ್ದಾನೆ. ಕುಶಾಲನಗರದ ಸಿದ್ದಾಪುರ ಚೆಕ್‍ಪೋಸ್ಟ್ ನಲ್ಲಿ ಆತನಿಗೆ 14 ದಿನಗಳ ಮನೆಯಲ್ಲಿ ಪ್ರತ್ಯೇಕವಾಗಿರುವಂತೆ ಕೈಗೆ ಸೀಲ್ ಹಾಕಿ ಕಳಿಸಲಾಗಿತ್ತು.ಕೈಗೆ ಸೀಲ್ ಹಾಕಿದ್ರೂ ಮುತ್ತುವೀರ ಗ್ರಾಮದಲ್ಲಿ ಓಡಾಡಿಕೊಂಡಿದ್ದನು. ಇದರಿಂದ ಗ್ರಾಮಸ್ಥರು ಮನೆಯಲ್ಲಿರಬೇಕೆಂದು ತರಾಟೆ ಸಹ ತೆಗೆದುಕೊಂಡಿದ್ದರು. ಆದರೂ ಮುತ್ತುವೀರ ಗ್ರಾಮದ ಪ್ರಮುಖ ಬೀದಿಗಳನ್ನು ಸುತ್ತತ್ತಿದ್ದನು. ಮುತ್ತುವೀರನಿಂದ ಆತಂಕಕ್ಕೊಳಗಾದ ಗ್ರಾಮಸ್ಥರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ವಿಷಯ ತಿಳಿದು ಗ್ರಾಮಕ್ಕೆ ಬಂದ ಪೊಲೀಸರು ಮುತ್ತುವೀರನನ್ನು ಕೋವಿಡ್ ಕೇರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.Sign in to your account
Username or Email Address


Password

 Remember Me


