ಮಂಗಳೂರು: ಸುರತ್ಕಲ್ ಯುವಕ ಕೊರೊನಾದಿಂದ ಮೃತಪಟ್ಟಿಲ್ಲ, ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.ಮಂಗಳವಾರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 27 ವರ್ಷದ  ಯುವಕನನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ ದಾರಿ ಮಧ್ಯೆ ಯುವಕ ಮೃತಪಟ್ಟಿದ್ದ. ಉಸಿರಾಟದ ತೊಂದರೆಯಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಕೊರೊನಾ ಬಂದಿರಬಹುದೇ ಎನ್ನುವ ಶಂಕೆ ಎದ್ದಿತ್ತು.ಕೊರೊನಾ ವೈರಸ್ ಶಂಕೆಯ ಹಿನ್ನೆಲೆ ಮೃತ ಯುವಕನ ಗಂಟಲಿನ ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗ ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದಿದೆ.ಮೃತಪಟ್ಟರೂ ಪರೀಕ್ಷಾ ವರದಿ ಫಲಿತಾಂಶ ಬರುವವರೆಗೂ ಮೃತದೇಹವನ್ನು ಹಸ್ತಾಂತರಿಸುವುದಿಲ್ಲ ಎಂದು ಜಿಲ್ಲಾಡಳಿತ ಮೃತನ ಪೋಷಕರಿಗೆ ತಿಳಿಸಿತ್ತು. ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಮೃತ ಯುವಕ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದನು.Sign in to your account
Username or Email Address


Password

 Remember Me


