ಬೆಂಗಳೂರು: ಇವತ್ತು ಮತ್ತಿಬ್ಬರಿಗೆ ಕೊರೊನಾ ಸೋಂಕು ತಗಲಿರೋದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 260ಕ್ಕೆ ತಲುಪಿದೆ. ಇಂದು ಬೆಳಗ್ಗೆ 11 ಮಂದಿಗೆ ಸೋಂಕು ತಗುಲಿರೋದು ವರದಿಯಲ್ಲಿ ದೃಢಪಟ್ಟಿತ್ತು. 260 ಜನರ ಪೈಕಿ 71 ಮಂದಿ ಸಂಪೂರ್ಣವಾಗಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.ರೋಗಿ ನಂಬರ್ 259: 35 ವರ್ಷದ ಮಹಿಳೆ ಬೆಂಗಳೂರಿನ ನಿವಾಸಿ. ಮಹಿಳೆ ರೋಗಿ ನಂಬರ್ 199ರ ಸಂಂಪರ್ಕದಲ್ಲಿದ್ದರು.
ರೋಗಿ ನಂಬರ್ 260: 36 ವರ್ಷದ ಪುರುಷನಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಿವಾಸಿ. ರೋಗಿ ನಂಬರ್ 176ರ ಪತಿ.ಇಂದು ಸಂಜೆ 5 ಗಂಟೆಯ ವರದಿಯಂತೆ, ಕರ್ನಾಟಕದಲ್ಲಿ ಒಟ್ಟಾರೆಯಾಗಿ 260 #COVID19 ಪ್ರಕರಣಗಳು ಖಚಿತವಾಗಿರುತ್ತದೆ. ಅವರ ಪೈಕಿ 71 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ. #IndiaFightsCorona #ಮನೆಯಲ್ಲೇಇರಿ— B Sriramulu (@sriramulubjp) April 14, 2020ಬೆಂಗಳೂರಿನ ರೋಗಿ ನಂಬರ್ 219 ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟು 10 ಮಂದಿ ಕೊರೊನಾಗೆ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ 11 ಸೇರಿದಂತೆ ಒಟ್ಟು 13 ಪ್ರಕರಣಗಳ ಇವತ್ತು ಬೆಳಕಿಗೆ ಬಂದಿದೆ.Sign in to your account
Username or Email Address


Password

 Remember Me


