ಮಂಗಳೂರು: ಉಸಿರಾಟದ ತೊಂದರೆಯಿಂದ ಮಂಗಳೂರು ಹೊರ ವಲಯದ ಸುರತ್ಕಲನ ಯುವಕ ಸಾವನ್ನಪ್ಪಿದ್ದು, ವೈದ್ಯರು ವರದಿಗಾಗಿ ಕಾಯುತ್ತಿದ್ದಾರೆ.ಯುವಕನನ್ನು ಮಂಗಳವಾರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸುವಾಗ ಸಾವನ್ನಪ್ಪಿದ್ದಾನೆ. ಕೊರೊನಾ ವೈರಸ್ ಶಂಕೆಯ ಹಿನ್ನೆಲೆ ಮೃತ ಯುವಕನ ಗಂಟಲಿನ ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಪರೀಕ್ಷಾ ವರದಿ ಬಂದ ಬಳಿಕ ಅಂತ್ಯಕ್ರಿಯೆ ನಡೆಸಲು ವೈದ್ಯರು ನಿರ್ಧರಿಸಿದ್ದಾರೆ.ವರದಿಯಲ್ಲಿ ಕೊರೊನಾ ಸೋಂಕು ತಗುಲಿದ್ರೆ ಕೋವಿಡ್-19 ನಿಯಮಗಳಿನುಸಾರವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತವೇ ಅಂತ್ಯಕ್ರಿಯೆ ನಡೆಸಲಿದೆ. ವರದಿ ನೆಗೆಟಿವ್ ಬಂದ್ರೆ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಮೃತ ಯುವಕ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದನು ಎಂಬ ಮಾಹಿತಿ ಲಭ್ಯವಾಗಿದ್ದು, ಆತನ ಟ್ರಾವೆಲ್ ಹಿಸ್ಟರಿಯನ್ನು ಕಲೆ ಹಾಕುವಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ.Sign in to your account
Username or Email Address


Password

 Remember Me


