ಹಾಸನ: ನಕಲಿ ಪಾಸ್ ಬಳಸಿ ಹಾಸನ ಪ್ರವೇಶಿಸಿದ ಯುವತಿಯರಿಬ್ಬರು ಪೊಲೀಸರ ಕೈಗೆ ತಗ್ಲಾಕೊಂಡಿದ್ದಾರೆ. ಇಬ್ಬರು ಮಂಗಳೂರಿನಿಂದ ಹಾಸನಕ್ಕೆ ಬಂದಿದ್ದು, ಸಕಲೇಶಪುರ ತಾಲೂಕಿನ ಆಚಂಗಿ ಗ್ರಾಮದ ನಿವಾಸಿಗಳೆಂದು ಹೇಳಿಕೊಂಡಿದ್ದಾರೆ.ಮಂಗಳೂರಿನಿಂದ ಶಿರಾಡಿಘಾಟ್ ಮೂಲಕ ಯುವತಿಯರು ಸಕಲೇಶಪುರಕ್ಕೆ ಬಂದಿದ್ದಾರೆ. ಕಾರ್ ಮೇಲೆ ಅಗತ್ಯ ಸೇವೆ ಪಾಸ್ ಅಂಟಿಸಿಕೊಂಡಿದ್ದು, ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಸಕಲೇಶಪುರ ಉಪ ವಿಭಾಗಾಧಿಕಾರಿ ಗಿರೀಶ್, ಇಬ್ಬರು ಯುವತಿಯರ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಯಾವುದೇ ಅಂಬುಲೆನ್ಸ್ ಸೇವೆ ಸಿಗದ ಹಿನ್ನೆಲೆಯಲ್ಲಿ ತಾವು ಔಷಧಿ ನೀಡಲು ಬಂದಿದ್ದು ಎಂದು ಹೇಳಿದ್ದಾರೆ.ಇಬ್ಬರ ಆರೋಗ್ಯ ತಪಾಸಣೆ ನಡೆಸಿ, ಮುಂದಿನ 14 ದಿನ ಹೋಮ್ ಕ್ವಾರಂಟೈನ್ ನಲ್ಲಿರುವಂತೆ ಪೊಲೀಸರು ಸೂಚಿಸಿದ್ದಾರೆ. ನಕಲಿ ಪಾಸ್ ಅಂಟಿಸಿದ್ದ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.Sign in to your account
Username or Email Address


Password

 Remember Me


