ಮಡಿಕೇರಿ: ಕೊರೊನಾ ಮಹಾಮಾರಿಯನ್ನು ತಡೆಗಟ್ಟಲು ದೇಶವೇ ಲಾಕ್‍ಡೌನ್ ಆಗಿದ್ದರೂ ಈ ರೆಸಾರ್ಟ್ ಗೆ ಮಾತ್ರ ಧನದಾಹ. ಆದ್ದರಿಂದ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪದ ಸಮೀಪದ ತೊಂಡೂರಿನಲ್ಲಿರುವ ಪ್ಯಾಡಿಂಗ್ಟನ್ ರೆಸಾರ್ಟ್‍ಗೆ ಬೀಗಮುದ್ರೆ ಹಾಕಲಾಗಿದೆ.ಲಾಕ್‍ಡೌನ್ ಮಾಡಿ ಜನ ಸಾಮಾನ್ಯರು ಅಗತ್ಯ ವಸ್ತುಗಳಕೊಳ್ಳಲು ಪರದಾಡುತ್ತಿದ್ದಾರೆ. ಆದರೆ ಇತ್ತ ಶ್ರೀಮಂತರ ಮತ್ತು ಅಧಿಕಾರಸ್ಥರ ಮಕ್ಕಳು ಮಾತ್ರ ಯಾವುದೆ ಅಡ್ಡಿ ಆತಂಕವಿಲ್ಲದೆ ಕೊಡಗಿನ ಪ್ಯಾಡಿಂಗ್ಟನ್ ರೆಸಾರ್ಟ್ ಗೆ ಕಳೆದ ನಾಲ್ಕು ದಿನಗಳ ಹಿಂದೆ ಬಂದು ಅಂದಿನಿಂದಲೂ ಮೋಜು ಮಸ್ತಿ ಮಾಡುತ್ತಿದ್ದರು. ಅಲ್ಲದೆ ಪ್ರವಾಸಿ ತಾಣಗಳಿಗೆ ತೆರಳಿ ಎಂಜಾಯ್ ಮಾಡುತ್ತಿದ್ದರು.ವಿಷಯ ತಿಳಿದ ಸುಂಟಿಕೊಪ್ಪ ಪೊಲೀಸ್ ನಿನ್ನೆ ಪ್ರಕರಣ ದಾಖಲಿಸಿದ್ದರು. ಇಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರ ನಿರ್ದೇಶನದಂತೆ ಸುಂಟಿಕೊಪ್ಪ ಪಂಚಾಯಿತಿ ಪಿಡಿಒ ರವೀಶ್ ಮತ್ತು ಸೋಮವಾರಪೇಟೆ ತಹಶೀಲ್ದಾರ್ ಗೋವಿಂದ್ ರಾಜ್ ರೆಸಾರ್ಟ್‍ಗೆ ಬೀಗಮುದ್ರೆ ಮಾಡಿದ್ದಾರೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸುವಂತೆ ಅಪ್ಪಚ್ಚು ರಂಜನ್ ಸೂಚಿಸಿದ್ದಾರೆ.Sign in to your account
Username or Email Address


Password

 Remember Me


