ಮಡಿಕೇರಿ: ಮಕ್ಕಳ ವಾರ್ಡಿಗೆ ಎಲ್ಲರನ್ನೂ ಬಿಟ್ಟರೆ ಕೊರೊನಾ ಸೋಂಕು ತಗುಲಬಹುದೆಂಬ ಆತಂಕದಿಂದ ಡೆಲಿವರಿಯಾದ ತಾಯಿ ಮಗುವಿನ ಬಳಿಗೆ ಯಾರನ್ನೂ ಬಿಡದ ಹಿಲೆನ್ನೆಯಲ್ಲಿ ನಾಲ್ಕು ದಿನದ ಮಗು ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.ಮೈಸೂರು ಜಿಲ್ಲೆಯ ಡೊಡ್ಡಕಮರಹಳ್ಳಿ ಗ್ರಾಮದ ಮಂಜುಳ-ಚನ್ನಬಸಪ್ಪ ದಂಪತಿ ತಮ್ಮ ಮಗಳು ಲಕ್ಷ್ಮಿಯನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಹೆರಿಗೆಗೆ ಕರೆದುಕೊಂಡು ಬಂದಿದ್ದರು. ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಗಿತ್ತು. ತಾಯಿ ಮಗು ಇಬ್ಬರು ಆರೋಗ್ಯವಾಗಿ ಇದ್ದಾರೆ ಎಂದು ವೈದ್ಯರು, ನರ್ಸ್ ತಿಳಿಸಿದ್ದರು.ಈ ನಡುವೆ ಕೊರೊನಾ ಭೀತಿ ಇರುವುದರಿಂದ ನರ್ಸ್‍ಗಳು ಮತ್ತು ಸೆಕ್ಯುರಿಟಿ ಗಾರ್ಡ್‌ಗಳು ತಾಯಿ ಮಗುವಿನ ಬಳಿ ಯಾರನ್ನೂ ಬಿಟ್ಟಿಲ್ಲ. ಸಿಸೇರಿಯನ್ ಆಗಿದ್ದ ಬಾಣಂತಿ ಲಕ್ಷ್ಮಿ ತನ್ನ ಮಗುವಿಗೆ ಸರಿಯಾಗಿ ಹಾಲುಣಿಸಲು ಸಾಧ್ಯವಾಗಿಲ್ಲ. ಹೀಗಾಗಿ ನಾಲ್ಕು ದಿನದ ಮಗುವಿಗೆ ಹಾಲು ನೆತ್ತಿಗೇರಿ ಉಸಿರುಗಟ್ಟಿ ಸಾವನ್ನಪ್ಪಿದೆ. ಮಗುವನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.ಸಿಸೇರಿಯನ್ ಆಗಿದ್ದ ತಾಯಿಯ ಬಳಿ ನರ್ಸ್‍ಗಳು ಸರಿಯಾಗಿ ಇರುತ್ತಿರಲಿಲ್ಲ. ತಾಯಿ ಮಗುವನ್ನು ನೋಡಿಕೊಳ್ಳಲು ನಮ್ಮನ್ನೂ ಬಿಡಲಿಲ್ಲ. ಹೀಗಾಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ. ಇದಕ್ಕೆ ಸೆಕ್ಯುರಿಟಿ ಗಾರ್ಡ್ ಮತ್ತು ನರ್ಸ್‌ಗಳೇ ನೇರ ಕಾರಣ ಅಂತ ಬಾಣಂತಿ ಲಕ್ಷ್ಮಿ ಪೋಷಕರು ಆರೋಪ ಮಾಡಿದ್ದಾರೆ.Sign in to your account
Username or Email Address


Password

 Remember Me


