ಚಿಕ್ಕಬಳ್ಳಾಪುರ: ಕೊರೊನಾದಿಂದ ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಾಜಿ ಸಚಿವ ಕೃಷ್ಣಬೈರೇಗೌಡ ರೈತರಿಂದ ಒಂದು ಟನ್ ಟೊಮೊಟೊ ಹಾಗೂ ಒಂದು ಟನ್ ತೊಂಡೆಕಾಯಿ ಖರೀದಿ ಮಾಡಿದ್ದಾರೆ. ತಮ್ಮ ಕ್ಷೇತ್ರದ ಬಡವರಿಗೆ ಆ ತರಕಾರಿಗಳನ್ನ ಉಚಿತವಾಗಿ ವಿತರಿಸಿದ್ದಾರೆ.ಇಂದು ಕೃಷ್ಣಬೈರೇಗೌಡ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ಇಲತೊರೆ ಗ್ರಾಮದ ರೈತ ನಾಗೇಶ್ ಹಾಗೂ ರಾಜಣ್ಣರ ತೋಟಕ್ಕೆ ಭೇಟಿ ನೀಡಿದ್ದಾರೆ. ಅವರು ಬೆಳೆದಿದ್ದ ಒಂದು ಟನ್ ಟೊಮೆಟೊ ಹಾಗೂ 1 ಟನ್ ತೊಂಡೆಕಾಯಿ ಖರೀದಿಸಿದ್ದಾರೆ. ಆ ತರಕಾರಿಯನ್ನು ತಮ್ಮ ಕ್ಷೇತ್ರದ ಬಡವರಿಗೆ ಉಚಿತವಾಗಿ ವಿತರಿಸಿದ್ದಾರೆ.ಈಗಾಗಲೇ ಕೊರೊನಾ ಎಫೆಕ್ಟ್ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಮಾತ್ರ ಹೇಳಿಕೆಗಳನ್ನ ಕೊಡುತ್ತಾ ರೈತರಿಗೆ ಎಲ್ಲವನ್ನೂ ಮಾಡಿದ್ದೀವಿ ಅಂತ ಹೇಳುತ್ತಾ ಪ್ರಚಾರ ಪಡೆದುಕೊಳ್ಳುತ್ತಿದೆ. ಆದರೆ ನಿಜವಾಗಿಯೂ ರೈತನ ಕಷ್ಟ ಪರಿಸಹರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹೇಳಿದರು.ತಮ್ಮ ಪಕ್ಷದ ಮುಖಂಡರು ಸಹ ರೈತರಿಂದ ಸಾಧ್ಯವಾದಷ್ಟು ತರಕಾರಿ ಖರೀದಿ ಮಾಡಿ ತಮ್ಮ ತಮ್ಮ ಕ್ಷೇತ್ರದ ಬಡ ಜನರಿಗೆ ಈ ಸಮಯದಲ್ಲಿ ಉಚಿತವಾಗಿ ಕೊಡಬೇಕು ಅಂತ ಮನವಿ ಮಾಡಿಕೊಂಡರು.Sign in to your account
Username or Email Address


Password

 Remember Me


