ನೆಲಮಂಗಲ: ಲಾಕ್‍ಡೌನ್ ಹಿನ್ನೆಲೆ ಮದ್ಯದಂಗಡಿಗಳು ಸಹ ಮುಚ್ಚಿದ್ದು, ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಖದೀಮರು ನೆಲಮಂಗಲದಲ್ಲಿ ಬಾರ್ ಗೆ ಕನ್ನ ಹಾಕಿದ್ದಾರೆ.ನೆಲಮಂಗಲ ಸಮೀಪದ ಗುಡೇಮಾರನಹಳ್ಳಿಯಲ್ಲಿ ಘಟನೆ ನಡೆದಿದ್ದು, ಖದೀಮರು ಬಾರ್‍ಗೆ ಕನ್ನ ಹಾಕಿದ್ದು, ಸಿಮೆಂಟ್ ಶೀಟ್ ಒಡೆದು ಬಾರ್ ನಲ್ಲಿದ್ದ ಮದ್ಯವನ್ನು ಕಳ್ಳತನ ಮಾಡಿದ್ದಾರೆ. ಗುಡೇಮಾರನಹಳ್ಳಿಯ ಶ್ರೀ ವೆಂಕಟೇಶ್ವರ ಬಾರ್ ನಲ್ಲಿ ಸುಮಾರು 40 ಸಾವಿರ ಮೌಲ್ಯದ ಮದ್ಯ ಕಳವು ಮಾಡಿ ಪರಾರಿಯಾಗಿದ್ದಾರೆ.ಕಳ್ಳರನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದು, ಬೆರಳಚ್ಚು ತಜ್ಞರ ತಂಡ ಮತ್ತು ಶ್ವಾನದಳ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿವೆ. ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


