ಕೋಲಾರ: ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ 18 ಜನರ ವರದಿ ನೆಗೆಟಿವ್ ಬಂದಿದ್ದು, ಕೋಲಾರ ಜನತೆ ಹಾಗೂ ಜಿಲ್ಲಾಡಳಿತ ಕೋವಿಡ್-19 ಆತಂಕದಿಂದ ಕೊಂಚ ನಿರಾಳವಾಗಿದೆ.ಜಿಲ್ಲೆಯ ಎರಡು ಕುಟುಂಬಗಳೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಬೈಲ್ ನರಸಾಪುರದ ಸೋಂಕಿತ ವ್ಯಕ್ತಿ ಸಂಪರ್ಕ ಹೊಂದಿದ್ದ ಪರಿಣಾಮ ಜಿಲ್ಲೆಯ ಸುಮಾರು 21 ಜನರನ್ನು ಹೋಮ್ ಕ್ವಾರಂಟೇನ್ ಮಾಡಲಾಗಿತ್ತು. ಅಲ್ಲದೆ 21 ಜನರ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಇದರಲ್ಲಿ 18 ಜನರ ವರದಿ ನೆಗೆಟಿವ್ ಬಂದಿದೆ. ಉಳಿದ ಮೂವರ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ. ಸಧ್ಯಕ್ಕೆ ಕೊರೊನಾ ಆತಂಕದಿಂದ ಕೊಂಚ ನಿರಾಳವಾಗಿದೆ.ಕೋಲಾರ ಗಡಿಭಾಗವಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬೈಲು ನರಸಾಪುರ ಗ್ರಾಮ ಪಂಚಾಯಿತಿ ಸದಸ್ಯ ಕೊರೊನಾ ಸೋಂಕಿತ ವ್ಯಕ್ತಿ, ಕೋಲಾರ ತಾಲೂಕಿನ ನರಸಾಪುರ ಗ್ರಾಮದ ಎರಡು ಕುಟುಂಬಗಳೊಂದಿಗೆ ಸಂಪರ್ಕ ಹೊಂದಿದ್ದ. ಹೀಗಾಗಿ ನರಸಾಪುರ ಗ್ರಾಮದ ಸುಮಾರು 21 ಜನರನ್ನ ಹೋಮ್ ಕ್ವಾರಂಟೇನ್ ಮಾಡಲಾಗಿತ್ತು. ಈ ಮೂಲಕ ನರಸಾಪುರ, ವೇಮಗಲ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು. ಇದೀಗ 18 ಜನರ ವರದಿ ನೆಗೆಟಿವ್ ಬಂದಿರುವ ಹಿನ್ನೆಲೆ ನರಸಾಪುರ ಗ್ರಾಮದ ಜನತೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಸಧ್ಯಕ್ಕೆ ನಿರಾಳವಾಗಿರುವ ಜಿಲ್ಲಾಡಳಿತ ಮೂವರ ವರದಿಗಾಗಿ ಕಾದು ಕುಳಿತಿದೆ.Sign in to your account
Username or Email Address


Password

 Remember Me


