ಬೆಂಗಳೂರು: ಒಂದು ಸಿನಿಮಾವನ್ನು ನಿರ್ದೇಶನ ಮಾಡಿ, ನಟಿಸಿ ಬಿಡುಗಡೆಯ ಸಮಯ ಬಂದಾಗ ಚಿತ್ರ ಏನಾಗಬಹುದು ಎಂದು ಚಿತ್ರತಂಡಕ್ಕೆ ಒಂದು ರೀತಿ ಟೆನ್ಶನ್‍ನಲ್ಲಿ ಇರುತ್ತದೆ. ಅದೇ ರೀತಿ ಡಾರ್ಲಿಂಗ್ ಕೃಷ್ಣ ಕೂಡ ತಾವು ನಿರ್ದೇಶನ ಮಾಡಿ ನಟಿಸಿದ್ದ ‘ಲವ್ ಮಾಕ್‍ಟೇಲ್’ ಸಿನಿಮಾ ಬಿಡುಗಡೆಯ ಹಿಂದಿನ ದಿನ ಹೇಗಿತ್ತು ಎಂಬ ಕಳವಳವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ನಟ ಕೃಷ್ಣ ಇನ್‍ಸ್ಟಾಗ್ರಾಂನಲ್ಲಿ ನಟಿ ಮಿಲನಾ ನಾಗರಾಜ್ ಜೊತೆ ಊಟ ಮಾಡುತ್ತಿರುವ ಫೋಟೋವೊಂದನ್ನು ಅಪ್ಲೋಡ್ ಮಾಡಿದ್ದಾರೆ. ಅದಕ್ಕೆ “ನಾವು ಲವ್ ಮಾಕ್‍ಟೇಲ್ ಸಿನಿಮಾ ಬಿಡುಗಡೆಯ ಹಿಂದಿನ ದಿನ ಡಿನ್ನರ್‌ಗೆ ಹೋಗಿದ್ದೆವು. ಒಂದು ವರ್ಷದ ಕಠಿಣ ಪರಿಶ್ರಮ ಅದು. ನಾಳೆ ಏನಾಗಬಹುದು ಎಂಬುದರ ಬಗ್ಗೆ ನಮಗೆ ಯಾವ ರೀತಿಯ ಐಡಿಯಾನೂ ಇರಲಿಲ್ಲ” ಎಂದು ಹೇಳಿಕೊಂಡಿದ್ದಾರೆ.ಅಲ್ಲದೇ “ಆ ದಿನಕ್ಕಾಗಿ ಮಿಲನಾ ನಾಗರಾಜ್‍ಗೆ ಧನ್ಯವಾದ ಹೇಳಲು ಬಯಸಿದ್ದೆ. ಆಕೆಯಲ್ಲಿ ಸುರಕ್ಷತೆ ಭಾವ ಮೂಡಿಸುವುದು ಮತ್ತು ಸಂತೋಷವಾಗಿ ನೋಡಿಕೊಳ್ಳಬೇಕಿತ್ತು. ಯಾಕೆಂದರೆ ನಾಳೆ ಎನ್ನವುದು ಅನಿಶ್ಚಿತವಾಗಿತ್ತು. ಆದರೂ ನಾವಿಬ್ಬರೂ ಅದನ್ನು ಖುಷಿಯಿಂದ ಎದುರಿಸಿದೆವು. ಅದಕ್ಕಾಗಿ ನಿಮಗೆಲ್ಲರಿಗೂ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅಭಿನಯದ ‘ಲವ್ ಮಾಕ್‍ಟೇಲ್’ ಸಿನಿಮಾ ಥಿಯೇಟರ್‌ನಲ್ಲಿ ತಡವಾಗಿ ಸದ್ದು ಮಾಡಿದ್ದರೂ ಆನ್‍ಲೈಲ್ ಪ್ಲಾಟ್‍ಫಾರ್ಮ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಈ ಚಿತ್ರವನ್ನು ನೋಡಿ ಪ್ರೇಕ್ಷಕರು ಫಿದಾ ಆಗಿದ್ದು, ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.https://www.instagram.com/p/B-zMYJ6giJB/ಅಷ್ಟೇ ಅಲ್ಲದೇ ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ಅವರು ಇತ್ತೀಚೆಗೆ ಈ ಸಿನಿಮಾವನ್ನು ಆನ್‍ಲೈನ್‍ನಲ್ಲಿ ವೀಕ್ಷಿಸಿದ್ದಾರೆ. ಸಿನಿಮಾ ತುಂಬಾ ಇಷ್ಟವಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.Sign in to your account
Username or Email Address


Password

 Remember Me


