– ನಂದಿನಿ ತುಪ್ಪದ ದರದಲ್ಲಿ ಬದಲಾವಣೆ ಯೋಚನೆ ಇಲ್ಲಬೆಂಗಳೂರು: ನಾವು ಗುಣಮಟ್ಟದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ದೇಶದ ಯಾವ ಲ್ಯಾಬ್‌ನಲ್ಲಾದರೂ ಪರೀಕ್ಷೆ ಮಾಡಲಿ ಎಂದು ಕೆಎಂಎಫ್ (KMF) ಎಂಡಿ ಜಗದೀಶ್ ಹೇಳಿದ್ದಾರೆ.ತಿರುಮಲ ತಿರುಪತಿ ದೇವಾಲಯ ಲಡ್ಡು ವಿವಾದದ (Tirupati Laddu Row) ಕುರಿತು ‘ಪಬ್ಲಿಕ್‌ ಟಿವಿʼ ಜೊತೆ ಮಾತನಾಡಿದ ಅವರು, ರೈತರಿಂದ ನೇರವಾಗಿ ಹಾಲು ಖರೀದಿಸಿ, ರೈತರ ಪರವಾಗಿ ಕೆಲಸ ಮಾಡುವ ಸಂಸ್ಥೆ ನಮ್ಮದು. ಇಡೀ ದೇಶದಲ್ಲೇ ಅತ್ಯುತ್ತಮ ಲ್ಯಾಬ್ ವ್ಯವಸ್ಥೆ ಇರೋದು ನಮ್ಮಲ್ಲಿಯೇ. ಎನ್‌ಎಬಿಎಲ್‌ನಿಂದ ಮಾನ್ಯತೆ ಪಡೆದಿರೋ ಏಕೈಕ ಲ್ಯಾಬ್ ನಮ್ಮ ಕೆಎಂಎಫ್ ಸಂಸ್ಥೆಯಲ್ಲಿದೆ. ನಮ್ಮ ಲ್ಯಾಬ್‌ನಲ್ಲೇ ಟೆಸ್ಟ್ ಮಾಡುವ ಸೌಲಭ್ಯವಿದೆ ಎಂದರು. ಇದನ್ನೂ ಓದಿ: ಇಡೀ ರಾಜ್ಯಕ್ಕೆ ಬೆಳಕು ನೀಡುವ ರಾಯಚೂರಿನಲ್ಲೇ ಬೆಳಕಿಲ್ಲ – ಸಾರ್ವಜನಿಕರಿಂದ ತೀವ್ರ ಆಕ್ರೋಶನಾವು ಗುಣಮಟ್ಟದಲ್ಲಿ ರಾಜಿಯಾಗದೇ ಇರೋದಕ್ಕೆ ಕಾರಣವೇ ನಮ್ಮಲ್ಲಿರೋ ಸೌಲಭ್ಯ ಮತ್ತು ಸೌಕರ್ಯಗಳು. ಪ್ರತಿ ಹಂತದಲ್ಲೂ ಗುಣಮಟ್ಟದ ಪರೀಕ್ಷೆ ಮಾಡಿಯೇ ತುಪ್ಪದ ಉತ್ಪಾದನೆ ನಡೆಯಲಿದೆ. ಆಹಾರ ಗುಣಮಟ್ಟದ ಪರೀಕ್ಷೆಯನ್ನು ಮೈಸೂರು ಲ್ಯಾಬ್‌ನಲ್ಲಿ ಅಲ್ಲ ಯಾವುದೇ ಲ್ಯಾಬ್‌ನಲ್ಲಿ ಬೇಕಾದರೂ ಮಾಡಿಸಲಿ. ನಮ್ಮದು ಅತ್ಯುತ್ತಮ ಗುಣಮಟ್ಟದ ಪ್ರೊಡಕ್ಟ್ ಎಂದು ಹೇಳಿದರು. ಇದನ್ನೂ ಓದಿ: ಇಡೀ ವಿಶ್ವದಲ್ಲಿ ಜನರ ಖಾತೆಗೆ ಹಣ ಹಾಕುತ್ತಿರುವ ಏಕೈಕ ಸರ್ಕಾರ ನಮ್ಮದು – ಯತೀಂದ್ರನಂದಿನಿ ತುಪ್ಪದ (Nandini Ghee) ದರದ ಬದಲಾವಣೆ ಮಾಡುವ ಯೋಚನೆ ಇಲ್ಲ. ತಿರುಮಲದಿಂದ ಮತ್ತೆ ನಮಗೆ ಟೆಂಡರ್ ನೀಡಿದ್ದಾರೆ. ಅವರು ಎಷ್ಟೇ ಬೇಡಿಕೆ ಇಟ್ಟರೂ ಅಷ್ಟು ಪ್ರಮಾಣದ ತುಪ್ಪವನ್ನು ಸರಬರಾಜು ಮಾಡುತ್ತೇವೆ. ಬೇಡಿಕೆ ಹೆಚ್ಚಾದರೂ ಗುಣಮಟ್ಟದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ತಿರುಮಲಕ್ಕೆ ಟ್ಯಾಂಕರ್ ಮೂಲಕ ತುಪ್ಪವನ್ನು ಕಳುಹಿಸಿಕೊಡಲಾಗುತ್ತದೆ. ಟ್ಯಾಂಕರ್‌ಗಟ್ಟಲೆ ತುಪ್ಪ ಕಳುಹಿಸುವುದರಿಂದ ಆ ತುಪ್ಪದ ಬೆಲೆ ಬೇರೆಯಾಗಿಯೇ ಇರುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯೋತ್ಸವ ಪ್ರಶಸ್ತಿಗೆ ಫುಲ್‌ ಡಿಮ್ಯಾಂಡ್‌ – 69 ಪ್ರಶಸ್ತಿಗೆ 2,000ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ






 Advertisement 




Sign in to your account
Username or Email Address


Password

 Remember Me


