– ಸತತ 1 ಗಂಟೆಗಳ ಕಾಲ ನಿಂತಲ್ಲೇ ನಿಂತ ವಾಹನಗಳುಬೆಂಗಳೂರು: ಗೂಡ್ಸ್ ಲಾರಿ (Goods Lorry) ಮೆಟ್ರೋ ತಡೆಗೋಡೆಗೆ ಡಿಕ್ಕಿ ಹೊಡೆದಿರುವ ಘಟನೆ ನಗರದ ನಾಗವಾರ-ಹೆಬ್ಬಾಳ (Nagavara – Hebbal) ಮಾರ್ಗದ ಕೆಂಪಾಪುರದ ಬಳಿ ನಡೆದಿದೆ.ಇಂದು (ಸೆ.20) ಬೆಳಗ್ಗೆ 7ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದ್ದು. ನಿಯಂತ್ರಣ ತಪ್ಪಿ ಗೂಡ್ಸ್ ಲಾರಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ.ಇದನ್ನೂ ಓದಿ: ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅರೆಸ್ಟ್ನಾಗವಾರ-ಹೆಬ್ಬಾಳ ಮಾರ್ಗದ ಕೆಂಪಾಪುರದ ಬಳಿಯಿರುವ ಔಟರ್‌ರಿಂಗ್ ರೋಡ್ ಸರ್ವೀಸ್ ರಸ್ತೆಯ ಮುಖ್ಯರಸ್ತೆಯಲ್ಲಿ 10 ಚಕ್ರದ ಲಾರಿ ಮೆಟ್ರೋ ಕಾಮಗಾರಿಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಎರಡು ಜೆಸಿಬಿ ಬಳಸಿ ಪೊಲೀಸರು ಲಾರಿಯನ್ನು ತೆಗೆಯಲು ಪ್ರಯತ್ನಪಡುತ್ತಿದ್ದಾರೆ.ಈ ಅವಘಡದಿಂದಾಗಿ ರಸ್ತೆ ಸಂಪೂರ್ಣ ಬಂದ್ ಆಗಿದ್ದು, 10ಕಿಮೀವರೆಗೂ ಟ್ರಾಫಿಕ್ ಜಾಮ್ (Traffic Jam) ಉಂಟಾಗಿದೆ. ಹೆಬ್ಬಾಳದಿಂದ ರಾಮಮೂರ್ತಿನಗರದವರೆಗೆ ಸಂಪೂರ್ಣವಾಗಿ ಟ್ರಾಫಿಕ್ ಜಾಮ್ ಆಗಿದೆ. ಇದರಿಂದಾಗಿ ಸತತ 1 ಗಂಟೆಗಳ ಕಾಲ ವಾಹನಗಳು ನಿಂತಲ್ಲೇ ನಿಂತು, ವಾಹನ ಚಾಲಕರು ಪರದಾಡುವಂತಾಯಿತು. ಕಾದು ಬೇಸತ್ತು ಹೋಗಿ, ಕೊನೆಗೆ ಟೈಂ ಆದ ಹಿನ್ನೆಲೆ ಬೈಕ್ ಸವಾರರು ಅಪಘಾತಗೊಂಡಿರುವ ಲಾರಿ ಕೆಳಗೆ ನುಗ್ಗಿಸಿ ಮುಂದೆ ಸಾಗುತ್ತಿದ್ದಾರೆ ಇದನ್ನೂ ಓದಿ: ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೇಗೌಡರ ಮಗನೇ ಅಲ್ಲ – ಹೆಚ್.ಡಿ ರೇವಣ್ಣ ಸವಾಲ್Sign in to your account
Username or Email Address


Password

 Remember Me


