ಕಲಬುರಗಿ: ಪ್ಯಾಲೆಸ್ತೀನ್ ಧ್ವಜ (Palestine Flag) ಹಿಡಿದು ಮೆರವಣಿಗೆ ಮಾಡಿದರೆ ತಪ್ಪೇನಿಲ್ಲ ಎನ್ನುವ ಮೂಲಕ ಸಚಿವ ಜಮೀರ್ ಅಹ್ಮದ್ (Zameer Ahmed Khan) ಪ್ಯಾಲೆಸ್ತೀನ್ ಧ್ವಜ ಮೆರವಣಿಗೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ.ರಾಜ್ಯದಲ್ಲಿ ಹಲವಡೆ ಕಿಡಗೇಡಿಗಳಿಂದ ಪ್ಯಾಲೆಸ್ತೀನ್ ಧ್ವಜ ಹಾರಾಟ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ಯಾಲೆಸ್ತೀನ್‌ಗೆ ಕೇಂದ್ರ ಸರ್ಕಾರವೇ ಬೆಂಬಲ ಕೊಟ್ಟಿದೆ. ಕೇಂದ್ರವೇ ‘ವಿ ಆರ್ ವಿತ್ ಪ್ಯಾಲೆಸ್ತೀನ್’ ಅಂದಿದೆ. ಕೇಂದ್ರ ಸರ್ಕಾರ ಹೇಳಿದ ಮೇಲೆ ತಾನೇ ಯಾರೋ ಧ್ವಜ ಹಿಡಿದು ಮೆರವಣಿಗೆ ಮಾಡಿದ್ದು. ಧ್ವಜ ಹಿಡಿದಿದರೆ ತಪ್ಪೇನು ಇಲ್ಲ ಅನ್ನಿಸುತ್ತೆ ಎಂದರು. ಇದನ್ನೂ ಓದಿ: ಖಲಿಸ್ತಾನಿ ಉಗ್ರನ ಹತ್ಯೆ ಸಂಚು | ಅಮೆರಿಕ ನ್ಯಾಯಾಲಯದ ಸಮನ್ಸ್‌ಗೆ ಅನಗತ್ಯ ಆರೋಪ ಎಂದ ಭಾರತಬೇರೆ ದೇಶದ ಪರ ಘೋಷಣೆ ಕೂಗಬಾರದು. ಘೋಷಣೆ ಕೂಗಿದರೆ ಅಂಥವರು ದೇಶದ್ರೋಹಿ ಕೆಲಸ ಮಾಡಿದಂತೆ ಆಗುತ್ತದೆ. ಘೋಷಣೆ ಕೂಗಿದವರು ಯಾರೇ ಇರಲಿ ಗಲ್ಲು ಶಿಕ್ಷೆಯಾಗಬೇಕು. ನಾನು ಮೊದಲು ಹಿಂದೂಸ್ತಾನಿ, ಆಮೇಲೆ ಕನ್ನಡಿಗ. ಅದಾದಮೇಲೆ ಮುಸ್ಲಿಂ. ಯಾರೇ ಆದರೂ ಬೇರೆ ದೇಶದ ಪರ ಘೋಷಣೆ ಕೂಗಬಾರದು ಎಂದು ತಿಳಿಸಿದರು. ಇದನ್ನೂ ಓದಿ: ದ್ವೇಷದಿಂದ ನನ್ನ ಮೇಲೆ ಎಫ್‌ಐಆರ್ ಮಾಡಿದ್ದಾರೆ: ಆರ್ ಆಶೋಕ್


 Advertisement 







 Advertisement 




Sign in to your account
Username or Email Address


Password

 Remember Me


