ಬಾಗಲಕೋಟೆ: ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಬಾದಾಮಿ ಬನಶಂಕರಿ ದೇವಾಲಯದ ಜಾತ್ರಾ ಮಹೋತ್ಸವವು ಇದೇ ಜನವರಿ 10 ರಂದು ನಡೆಯಲಿದೆ.ಒಂದು ತಿಂಗಳ ಕಾಲ ನಡೆಯುವ ಜಾತ್ರೆಯಲ್ಲಿ ನಾಟಕಗಳ ಪ್ರದರ್ಶನ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ಹಗಲು- ರಾತ್ರಿ ನಡೆಯುವ ಏಕೈಕ ಮನರಂಜನೆ ಜಾತ್ರೆ ಆಗಿದ್ದು, ಎಲ್ಲಾ ಬಗೆಯ ಸಾಮಾಗ್ರಿಗಳು ದೊರಕುವುದು ಜಾತ್ರೆಯ ವಿಶೇಷತೆಯಾಗಿದೆ. ಜಾತ್ರೆಯ ಮುಂಚೆಯೇ ನಾಟಕ ಕಂಪನಿಗಳು ಯಾವುವು? ಅದರಲ್ಲಿ ಯಾವ ನಾಟಕಗಳ ಪ್ರದರ್ಶನ ಇದೆ ಎಂಬುದು ಕುತೂಹಲಕಾರಿ ಆಗಿರುತ್ತದೆ.ಈ ವರ್ಷದ ಜಾತ್ರೆಯಲ್ಲಿ ಎಂಟು ನಾಟಕ ಕಂಪನಿಗಳು ಭಾಗವಹಿಸಲಿದೆ. ಸಿದ್ದರಾಮಯ್ಯನವರ ಭಾಷಣದಲ್ಲಿ ಫುಲ್ ವೈರಲ್ ಆಗಿರುವ ‘ಹೌದು ಹುಲಿಯಾ’ ಡೈಲಾಗ್‍ನನ್ನೇ ಒಂದು ನಾಟಕಕ್ಕೆ ಹೆಸರಿಡಲಾಗಿದೆ. ಬಾದಾಮಿ ಕ್ಷೇತ್ರದ ಶಾಸಕರು ಆಗಿರುವ ಸಿದ್ದರಾಮಯ್ಯನವರ ಕ್ಷೇತ್ರದಲ್ಲಿ ‘ಹೌದು ಹುಲಿಯಾ’ ನಾಟಕ ಈ ಬಾರಿ ಹೆಚ್ಚು ಗಮನ ಸೆಳೆದಿದೆ. ಇದರ ಜೊತೆಗೆ ‘ಗೌರಿ ಹೋದಳು ಗಂಗೆ ಬಂದಳು’, ‘ನಿಶೆ ಏರಿಶ್ಯಾಳ ನವರಂಗಿ’, ‘ಹೌದಲೇನ ರಂಗಿ ಉದಲೇನ ಪುಂಗಿ’, ‘ರಕ್ತ ರಾತ್ರಿ’, ‘ಬಂದರ ಬಾರ ಬಸಣ್ಣಿ’, ‘ಮನಸ್ಯಾಕ ಕೊಟ್ಟಿ ಕೈಯರ ಬಿಟ್ಟಿ’, ‘ಸಿಂಪಲ್ ಹುಡುಗ ಡಿಂಪಲ್ ಹುಡುಗಿ’ ನಾಟಕಗಳ ಪ್ರದರ್ಶನ ನಡೆಯಲಿದೆ.ಜನವರಿ 9 ರಂದು ಪ್ರತಿ ಮೂರು ಪ್ರದರ್ಶನಗಳು ನಡೆಯಲಿದೆ. ಸಂಜೆ ಪ್ರಾರಂಭವಾಗಿ ಬೆಳಗಿನ ಜಾವದವರೆಗೆ ನಾಟಕ ಪ್ರದರ್ಶನ ನಡೆಯಲಿದ್ದು, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಂದ ಈ ಬನಶಂಕರಿ ದೇವಾಲಯ ಜಾತ್ರೆಯನ್ನು ನೋಡಲು ಸಾವಿರಾರು ಮಂದಿ ಬರುತ್ತಾರೆ.Sign in to your account
Username or Email Address


Password

 Remember Me


