ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರಲ್ಲಿ ವಾಂಗಿಬಾತ್ ಮತ್ತು ಚಿತ್ರಾನ್ನಕ್ಕಾಗಿ ಚಂದನ್ ಆಚಾರ್ ಮತ್ತು ದೀಪಿಕಾ ದಾಸ್ ಮಧ್ಯೆ ಗಲಾಟೆ ನಡೆದಿದೆ.ದೀಪಿಕಾ ಮತ್ತು ಚಂದನ್ ಸೇರಿದಂತೆ  ಮನೆಯ ಸದಸ್ಯರು ಸೇರಿಕೊಂಡು ಅಡುಗೆ ಮಾಡುತ್ತಿದ್ದರು. ಈ ವೇಳೆ ದೀಪಿಕಾ ದಾಸ್ ಮತ್ತು ಚಂದನ್ ಆಚಾರ್ ಮಧ್ಯೆ ಅಡುಗೆ ಮಾಡುವ ವಿಚಾರಕ್ಕೆ ವಾಗ್ವಾದ ನಡೆದಿದೆ. ಚಂದನ್, ನಾಳೆ ನೀವು ಮಾಡಿ, ನಾಳಿದ್ದು ನಾನು ಅಡುಗೆ ಮಾಡುತ್ತೀನಿ ಎಂದು ಹೇಳಿದ್ದಾರೆ. ಆಗ ದೀಪಿಕಾ ನಾಳೆ ವಾಂಗಿಬಾತ್ ಮಾಡುತ್ತೀನಿ ಎಂದರು. ಚಂದನ್ ನಾಳಿದ್ದು ನಾನು ಚಿತ್ರಾನ್ನ ಮಾಡುತ್ತೇನೆ ಎಂದು ಇಬ್ಬರು ಚರ್ಚಿಸುತ್ತಿದ್ದರು. ಕೊನೆಗೆ ಚಿತ್ರಾನ್ನ ಮಾಡೋದಾ, ವಾಂಗಿಬಾತ್ ಮಾಡೋದಾ ಎಂಬ ಕಾರಣಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು.ಆಗ ಕೋಪಗೊಂಡು ದೀಪಿಕಾ, ಚಂದನ್ ನೀವು ನನಗೆ ತುಂಬಾ ಇರಿಟೇಟ್ ಮಾಡುತ್ತಿದ್ದೀರಾ. ಎಲ್ಲರೂ ಇಲ್ಲಿ ಬೇರೆ ಬೇರೆ ಮನಸ್ಥಿತಿಯಲ್ಲಿ ಇದ್ದಾರೆ. ನಿಮ್ಮ ತರ ಯಾರೂ ಇಲ್ಲ, ಬೇರೆಯವರ ಬಗ್ಗೆ ಮಾತನಾಡಿಬೇಡಿ. ನಿಮ್ಮ ಮನಸ್ಥಿತಿ ಬಗ್ಗೆ ತಿಳಿದುಕೊಳ್ಳಿ ಎಂದು ಗರಂ ಆದರು. ಆಗ ಚಂದನ್, ನಾವೇನು ಇಲ್ಲಿ ಸುಮ್ಮನೆ ತಿಂದುಕೊಂಡು ಹೋಗಬೇಕಾ. ನನ್ನದೇ ನಡಿಯಬೇಕು, ನನ್ನದೇ ಆಗಬೇಕು. ನಿಮ್ಮ ತರಹದ ಮನಸ್ಥಿತಿ ನನ್ನಲಿಲ್ಲ ಎಂದು ವಾದ ಮಾಡಿದರು.ಬೇರೆಯವರ ಬಗ್ಗೆ ಬೆರಳು ತೋರಿಸಬೇಡಿ. ಸಣ್ಣ ಮನಸ್ಥಿತಿ ಬಿಡಿ, ನನ್ನ ಹತ್ತಿರ ವಾದ ಮಾಡಕ್ಕೆ ಬರಬೇಡಿ ಎಂದು ದೀಪಿಕಾ ಹೇಳಿದರೆ, ಚಂದನ್, ಡಬಲ್ ಗೇಮ್ ಆಡಬೇಡಿ, ನನ್ನ ಮನಸ್ಥಿತಿ ನನಗೆ ಗೊತ್ತು, ನಾಲಿಗೆ ಮೇಲೆ ಒಂದು ವಿಚಾರ ಇರಲಿ ಎಂದು ಒಬ್ಬರಿಗೊಬ್ಬರು ಕಿತ್ತಾಡಿದರು. ಕೊನೆಗೆ ದೀಪಿಕಾ ಬೇಸರಗೊಂಡು ಅಡುಗೆ ಮನೆಯಿಂದ ಹೊರ ಹೋದರು.ಇತ್ತ ಚಂದನ್, ಕ್ಯಾಪ್ಟನ್ ಕಿಶನ್ ಜೊತೆಯೂ ವಾದ ಮಾಡಿದ್ದಾರೆ. ನನ್ನದೇ ನಡಿಯಬೇಕು ಅಂತಿದೆಯಲ್ಲಾ ಅದನ್ನು ಮನೆಯಲ್ಲಿ ಇಟ್ಟುಕೊಳ್ಳಲಿ ಎಂದು ದೀಪಿಕಾ ಬಗ್ಗೆ ಹೇಳಿದ್ದಾರೆ. ಏನಾದರೂ ಆದರೆ ಚಂದನ್ ಎಂದು ಮನೆಯವರೆಲ್ಲಾ ಹೇಳುತ್ತಾರೆ. ಇದೊಂದು ಸಣ್ಣ ವಿಚಾರ, ಇದನ್ನೂ ಇಷ್ಟೊಂದು ಕಾಂಪ್ಲಿಕೇಟ್ ಮಾಡಬಾರದಿತ್ತು. ನಮ್ಮನ್ನು ಮಾತಾಡಕ್ಕೂ ಬಿಡಲ್ಲ, ಅಡುಗೆ ಮಾಡಕ್ಕೂ ಬಿಡಲ್ಲ, ಮೇಲೊಂದು ಹಿಂದೊಂದು ಮಾತನಾಡಕ್ಕೆ ಬರಲ್ಲ ಎಂದು ಚಂದನ್ ವಾದ ಮಾಡಿದರು.Sign in to your account
Username or Email Address


Password

 Remember Me


