ಯಾದಗಿರಿ: ಒಂದು ಕಡೆ ರಾಜ್ಯದ ಹಲವು ಕಡೆ ಭಾರತ್ ಬಂದ್ ಮತ್ತು ಮುಷ್ಕರದ ಬಿಸಿ ಜೋರಾಗಿದೆ. ಯಾದಗಿರಿಯಲ್ಲಿ ಮಾತ್ರ ಯಶ್ ಅಭಿಮಾನಿಗಳ ಬರ್ತ್ ಡೇ ಸಂಭ್ರಮ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಹುಟ್ಟುಹಬ್ಬದಂದೇ ಎದುರಾಳಿಗಳನ್ನು ಚಚ್ಚಲು ಸುತ್ತಿಗೆ ಹಿಡಿದು ಬಂದ ರಾಕಿಭಾಯ್ಜಿಲ್ಲೆಯ ಮುದ್ನಾಳ ಸೇರಿದಂತೆ ಯಾದಗಿರಿ ನಗರದ ಯಶ್ ಅಭಿಮಾನಿಗಳು ಭಾರತ್ ಬಂದ್ ಬಗ್ಗೆ ತಲೆ ಕಡೆಸಿಕೊಳ್ಳದೆ ರಾಕಿಭಾಯ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಅಭಿಮಾನಿಗಳು ಯಶ್ ಬರ್ತ್ ಡೇ ಹಿನ್ನೆಲೆಯಲ್ಲಿ ಅವರ ಬ್ಯಾನರ್‌ಗೆ ಹಾಲಿನ ಅಭಿಷೇಕ ಮಾಡಿ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಾನು ಹೆಜ್ಜೆ ಇಟ್ಟಾಗಿದೆ, ಆಟದ ರೇಂಜ್ ಚೇಂಜ್ ಆಗಿದೆ: ಯಶ್ ಖಡಕ್ ಡೈಲಾಗ್ ಅಷ್ಟೇ ಅಲ್ಲದೇ ಕೇಕ್ ಕತ್ತರಿಸಿ ಯಶ್‍ಗೆ ಜಯ ಘೋಷಣೆ ಕೂಗುವ ಮೂಲಕ ತಮ್ಮ ನೆಚ್ಚಿನ ನಾಯಕ ನಟನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ.ಬೆಂಗಳೂರಿನ ನಾಯಂಡಹಳ್ಳಿ ಸಿಗ್ನಲ್ ಬಳಿ ನಂದಿ ಲಿಂಕ್ ಗ್ರೌಂಡ್‍ನಲ್ಲಿ ನಡೆದ ಯಶ್ ಹುಟ್ಟುಹಬ್ಬಕ್ಕೆ 5000 ಸಾವಿರ ಕೆ.ಜಿ ಕೇಕ್ ತಯಾರು ಮಾಡಲಾಗಿತ್ತು. ಪತ್ನಿ ರಾಧಿಕಾ ಪಂಡಿತ್ ಜೊತೆಗೆ ಆಗಮಿಸಿದ ನಟ ಯಶ್ 5000 ಕಿ.ಜಿ ಕೇಕ್ ಕಟ್ ಮಾಡಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.Sign in to your account
Username or Email Address


Password

 Remember Me


