ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರು ಇಂದು ತಮ್ಮ 34ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಯಶ್ ಮಗಳು ಐರಾ ತನ್ನ ಹುಟ್ಟುಹಬ್ಬಕ್ಕೆ ಕೇಕ್ ತಯಾರಿಸಿದ್ದಾಳೆ. ಇನ್ನು ನಟಿ ರಾಧಿಕಾ ಪಂಡಿತ್ ತಮ್ಮ ಪತಿ ಯಶ್ ಅವರ ಇನ್‍ಸ್ಟಾ ಖಾತೆ ಹ್ಯಾಕ್ ಮಾಡುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ.ರಾಧಿಕಾ ತನ್ನ ಮಗಳು ಐರಾ ಜೊತೆ ಕೇಕ್ ತಯಾರಿಸುತ್ತಿರುವ ವಿಡಿಯೋವನ್ನು ಯಶ್ ಅವರ ಇನ್‍ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, “ಸರ್ಪ್ರೈಸ್, ನಿಮ್ಮ ಜೀವನವನ್ನು ನಾವು ವಹಿಸಿಕೊಂಡಂತೆ, ನಿಮ್ಮ ಖಾತೆಯನ್ನು ಸಹ ವಹಿಸಿಕೊಂಡಿದ್ದೇವೆ. ನಿಮ್ಮ ದೊಡ್ಡ ಅಭಿಮಾನಿ ಕಡೆಯಿಂದ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ನಾನು ಹೆಜ್ಜೆ ಇಟ್ಟಾಗಿದೆ, ಆಟದ ರೇಂಜ್ ಚೇಂಜ್ ಆಗಿದೆ: ಯಶ್ ಖಡಕ್ ಡೈಲಾಗ್  ????SURPRISE!???? We’ve taken over your account like we’ve taken over your life. ???? Happy birthday????to the one and only #RockingStar⭐from your biggest fans! ???? #hackedwithlove #ayradhika #rockinghabba2020A post shared by  Yash (@thenameisyash) on Jan 7, 2020 at 1:59pm PSTವಿಡಿಯೋದಲ್ಲಿ ರಾಧಿಕಾ, ಯಶ್ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು. ಪ್ರತಿ ವರ್ಷ ನಾನು ನಿಮ್ಮ ಹುಟ್ಟುಹಬ್ಬಕ್ಕೆ ಕೇಕ್ ತಯಾರಿಸುತ್ತೇನೆ. ಈ ವರ್ಷ ಕೇಕ್ ತಯಾರಿಸಲು ನನಗೆ ಸಹಾಯ ಮಾಡಲು ಐರಾ ಇದ್ದಾಳೆ. ಆದರೆ ಆಕೆ ಕೇಕ್ ತಯಾರಿಸುವುದಕ್ಕಿಂತ ಹೆಚ್ಚಾಗಿ ತಿನ್ನುತ್ತಿದ್ದಾಳೆ. ಆದರೆ ನಾವು ಆಕೆಯ ಶ್ರಮವನ್ನು ಮೆಚ್ಚಲೇಬೇಕು. ನಿಮಗೋಸ್ಕರ ನಾನು ಒಂದು ಪೀಸ್ ಕೇಕ್ ಅನ್ನು ತಿನ್ನುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಕಿಭಾಯ್ – ವಿಶ್ವ ದಾಖಲೆ ನಿರ್ಮಿಸಿದ ಯಶ್ ಬರ್ತ್ ಡೇಬೆಂಗಳೂರಿನ ನಾಯಂಡಹಳ್ಳಿ ಸಿಗ್ನಲ್ ಬಳಿ ನಂದಿ ಲಿಂಕ್ ಗ್ರೌಂಡ್‍ನಲ್ಲಿ ನಡೆದ ಯಶ್ ಹುಟ್ಟುಹಬ್ಬಕ್ಕೆ 5000 ಕೆಜಿ ಕೇಕ್ ತಯಾರಿಸಲಾಗಿತ್ತು. ರಾತ್ರಿ ಪತ್ನಿ ರಾಧಿಕಾ ಜೊತೆಗೆ ಆಗಮಿಸಿದ ಯಶ್ 5000 ಕೆಜಿ ಕೇಕ್ ಕಟ್ ಮಾಡಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅಲಹಬಾದ್‍ನಿಂದ ಆಗಮಿಸಿದ ವರ್ಲ್ಡ್ ರೆಕಾರ್ಡ್ ಕಮಿಟಿ ಅಧ್ಯಕ್ಷ ಪವನ್ ಸಾಲಂಗಿ ಐದು ಸಾವಿರ ಕೆಜಿ ಕೇಕ್ ಪರಿಶೀಲನೆ ನಡೆಸಿದರು.ಇದೇ ವೇಳೆ ಮಾತಾಡಿದ ಅಧ್ಯಕ್ಷ ಪವನ್ ಸಾಲಂಗಿ, ಇದು ಸೌತ್ ಇಂಡಿಯಾದಲ್ಲೇ ಮೊದಲು ಮತ್ತು ಇಲ್ಲಿಯವರೆಗೆ ಯಾವುದೇ ಸೆಲೆಬ್ರಿಟಿ ಐದು ಸಾವಿರ ಕೆಜಿ ಕೇಕ್ ಕಟ್ ಮಾಡಿ ಬರ್ತ್ ಡೇ ಆಚರಿಸಿಕೊಂಡಿಲ್ಲ. ಹಾಗಾಗಿ ಇದು ವಿಶ್ವ ದಾಖಲೆ ಪಟ್ಟಿಗೆ ಸೇರಲಿದೆ ಎಂದರು. ಇನ್ನು ಹುಟ್ಟುಹಬ್ಬಕ್ಕೆ 216 ಅಡಿ ಕಟೌಟ್ ಕೂಡ ನಿರ್ಮಿಸಿರುವುದು ಕೂಡ ದಾಖಲೆಯಾಗಿದೆ. ನಂದಿ ಲಿಂಕ್ ಗ್ರೌಂಡ್‍ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿ ಯಶ್ ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದರು.Sign in to your account
Username or Email Address


Password

 Remember Me


