ಬೆಂಗಳೂರು: ಕೇಂದ್ರದ ಕಾರ್ಮಿಕ ನೀತಿ ವಿರೋಧಿಸಿ ದೇಶದಾದ್ಯಂತ ವಿವಿಧ ಸಂಘಟನೆಗಳು ಕರೆ ಕೊಟ್ಟಿರುವ ಮುಷ್ಕರದ ಎಫೆಕ್ಟ್ ಸಿಲಿಕಾನ್ ಸಿಟಿ ಬೆಂಗಳೂರಿಗೆ ತಟ್ಟಿಲ್ಲ.ನಗರದ ಹೃದಯ ಭಾಗ ಮೆಜೆಸ್ಟಿಕ್‍ನಲ್ಲಿ ಯಾವುದೇ ವ್ಯತ್ಯಯ ಕಂಡುಬಂದಿಲ್ಲ. ಬಿಎಂಟಿಸಿ, ಕೆಎಸ್ಆರ್​ಟಿಸಿ, ರೈಲ್ವೆ ನಿಲ್ದಾಣದಲ್ಲಿ ಜನಜೀವನ ಎಂದಿನಂತೆ ಇದೆ. ಪ್ರಯಾಣಿಕರು ಕೂಡ ಎಂದಿನಂತೆ ತಮ್ಮ ಕೆಲಸಗಳಿಗೆ ಹಾಜರ್ ಆಗುತ್ತಿದ್ದಾರೆ. ಇನ್ನೂ ಮೆಜೆಸ್ಟಿಕ್‍ನಲ್ಲಿ ಆಟೋಗಳು ಕೂಡ ಸಂಚರಿಸುತ್ತಿವೆ. ಅವರು ಕೂಡ ಮುಷ್ಕರಕ್ಕೆ ಬೆಂಬಲ ಕೊಟ್ಟಿಲ್ಲ. ಕೆಲ ಪ್ರಯಾಣಿಕರಿಗೆ ಮುಷ್ಕರದ ಬಗ್ಗೆ ಗೊಂದಲ ವಿದ್ದು ಕೊಂಚ ಆತಂಕದಲ್ಲಿ ಬಂದಿದ್ದರು.ಬೆಳಗ್ಗೆ 10 ಗಂಟೆಯ ನಂತರ ಮುಷ್ಕರಕ್ಕೆ ಕರೆಕೊಟ್ಟಿರುವ ಸಂಘಟನೆಗಳು ಮೆಜೆಸ್ಟಿಕ್ ಸೇರಿದಂತೆ ಕೆಲ ಏರಿಯಾಗಳಲ್ಲಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. 10 ಗಂಟೆಯ ನಂತರ ಜನ ಜೀವನದಲ್ಲಿ ವ್ಯತ್ಯಾಸ ಕಂಡುಬರುವ ಸಾಧ್ಯತೆ ಇದೆ. ನಗರಾದ್ಯಂತ ಪೊಲೀಸರು ಕೂಡ ಯಾವುದೇ ಅನಾಹುತ ಆಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ.ಪೊಲೀಸರ ಹೈ ಅಲರ್ಟ್:
ಭಾರತ ಬಂದ್ ಹಿನ್ನೆಲೆಯಲ್ಲಿ ಪೊಲೀಸರು ಕೂಡ ಫುಲ್ ಅಲರ್ಟ್ ಆಗಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆಯಿಂದ ಇದ್ದಾರೆ. ಪ್ರತಿ ರಸ್ತೆಯಲ್ಲೂ ಪೊಲೀಸರು ಹೈ ಅಲರ್ಟ್ ಆಗಿದ್ದು, ಕಾರ್ಮಿಕ ಸಂಘಟನೆಗಳು ರ‍್ಯಾಲಿ ಮಾಡಿದರೆ, ಅಂಗಡಿ ಮುಂಗಟ್ಟುಗಳ ಬಲವಂತವಾಗಿ ಮುಚ್ಚಿಸದಂತೆ ಹೆಚ್ಚಿನ ಗಸ್ತು ಸುತ್ತುತ್ತಾ ಇದ್ದಾರೆ.ಅದರಲ್ಲೂ ಕೈಗಾರಿಕಾ ಪ್ರದೇಶಗಳಿಗೆ ಹೆಸರುವಾಸಿಯಾಗಿರುವ ಪೀಣ್ಯಾದಲ್ಲಿ ಅತಿ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಕೆಎಸ್‌ಆರ್‌ಪಿ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರನ್ನು ಅತಿ ಹೆಚ್ಚಾಗಿ ಬಳಸಿಕೊಂಡಿದ್ದಾರೆ. ಪಿಎಫ್ ವಿಚಾರಕ್ಕೆ ಆದಂತಹ ಘಟನೆ ಮರುಕಳಿಸದಂತೆ ಅತಿ ಹೆಚ್ಚಿನ ಎಚ್ಚರಿಕೆಯನ್ನು ವಹಿಸಲಾಗಿದೆ. ಪ್ರತಿ ರಸ್ತೆಯಲ್ಲೂ ಪೊಲೀಸರ ನಿಯೋಜನೆ ಮಾಡಲಾಗಿದೆ.Sign in to your account
Username or Email Address


Password

 Remember Me


