ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಯಶ್ ಅವರ 34ನೇ ಹುಟ್ಟುಹಬ್ಬ ವಿಶ್ವ ದಾಖಲೆ ಪಟ್ಟಿಗೆ ಸೇರಿದೆ.ಬೆಂಗಳೂರಿನ ನಾಯಂಡಹಳ್ಳಿ ಸಿಗ್ನಲ್ ಬಳಿ ನಂದಿ ಲಿಂಕ್ ಗ್ರೌಂಡ್‍ನಲ್ಲಿ ನಡೆದ ಯಶ್ ಬರ್ತ್ ಡೇಗೆ 5000 ಸಾವಿರ ಕೆ.ಜಿ ಕೇಕ್ ತಯಾರು ಮಾಡಲಾಗಿತ್ತು. ಪತ್ನಿ ರಾಧಿಕಾ ಪಂಡಿತ್ ಜೊತೆಗೆ ಆಗಮಿಸಿದ ನಟ ಯಶ್ 5000 ಕೆ.ಜಿ ಕೇಕ್ ಕಟ್ ಮಾಡಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.ಅಲಹಬಾದ್‍ನಿಂದ ಆಗಮಿಸಿದ ವರ್ಲ್ಡ್ ರೆಕಾರ್ಡ್ ಕಮಿಟಿ ಅಧ್ಯಕ್ಷ ಪವನ್ ಸಾಲಂಗಿ ಐದು ಸಾವಿರ ಕೆಜಿ ಕೇಕ್ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಮಾತಾಡಿದ ಅಧ್ಯಕ್ಷ ಪವನ್ ಸಾಲಂಗಿ, ಇದು ಸೌತ್ ಇಂಡಿಯಾದಲ್ಲೇ ಮೊದಲು ಮತ್ತು ಇಲ್ಲಿಯವರೆಗೆ ಯಾವುದೇ ಸೆಲೆಬ್ರಿಟಿ ಐದು ಸಾವಿರ ಕೆಜಿ ಕೇಕ್ ಕಟ್ ಮಾಡಿ ಬರ್ತ್ ಡೇ ಆಚರಿಸಿಕೊಂಡಿಲ್ಲ. ಹಾಗಾಗಿ ಇದು ವಿಶ್ವ ದಾಖಲೆ ಪಟ್ಟಿಗೆ ಸೇರಲಿದೆ ಎಂದರು.ಇನ್ನೂ ಹುಟ್ಟುಹಬ್ಬಕ್ಕೆ 216 ಅಡಿ ಕಟೌಟ್ ಕೂಡ ನಿರ್ಮಿಸಿರುವುದು ಕೂಡ ದಾಖಲೆಯಾಗಿದೆ. ನಂದಿ ಲಿಂಕ್ ಗ್ರೌಂಡ್‍ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿ ಯಶ್ ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದರು. ಈ ಹಿಂದೆ ತಮಿಳುನಾಡಿನಲ್ಲಿ ಅಭಿಮಾನಿಗಳು ನಟ ಸೂರ್ಯ ಅವರ ವಿಶ್ವದ ಅತೀ ದೊಡ್ಡ ಕಟೌಟ್ ನಿರ್ಮಿಸಿದ್ದರು. ಸೂರ್ಯ ಅವರ ಕಟೌಟ್ 215 ಅಡಿ ಎತ್ತರವಿತ್ತು. ಈಗ ಯಶ್ ಅಭಿಮಾನಿಗಳು 216 ಅಡಿ ಎತ್ತರದ ಕಟೌಟ್ ನಿರ್ಮಿಸಿ ಸೂರ್ಯ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.Sign in to your account
Username or Email Address


Password

 Remember Me


