ಮಂಗಳೂರು: ಬಡಗುತಿಟ್ಟಿನ ಪ್ರಸಿದ್ಧ ಭಾಗವತ ಸುಬ್ರಹ್ಮಣ್ಯ ಆಚಾರ್ ಮಂಗಳೂರಿನ ಕುಲಶೇಖರದಲ್ಲಿ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಸುಬ್ರಹ್ಮಣ್ಯ ಆಚಾರ್ ಪ್ರಸ್ತುತ ಉಡುಪಿ ಜಿಲ್ಲೆಯ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಯಕ್ಷಗಾನ ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದರು. ಸುಬ್ರಹ್ಮಣ್ಯ ಆಚಾರ್ ಮೂಲತಃ ಶಿವಮೊಗ್ಗ ಜಿಲ್ಲೆ ಹೊಸನಗರ ನಿವಾಸಿಯಾಗಿದ್ದು, ಮೇಳದ ತಿರುಗಾಟದಲ್ಲೇ ಹೆಚ್ಚಿನ ಕಾಲ ಕಳೆಯುತ್ತಿದ್ದರು.ಇವರ ಭಾಗವತಿಗೆಯನ್ನು ಕೇಳಲೆಂದೇ ದೂರದ ಊರಿನಿಂದ ಯಕ್ಷಾಭಿಮಾನಿಗಳು ಬರುತ್ತಿದ್ದರು. ಸುಬ್ರಹ್ಮಣ್ಯ ಆಚಾರ್ ಅವರು ಉಡುಪಿಯ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಯಾಗಿದ್ದು ಬಡಗು ಯಕ್ಷರಂಗದಲ್ಲಿ ನಡುತಿಟ್ಟಿನ ಭಾಗವತಿಕೆ ಪರಂಪರೆಯ ಪ್ರಮುಖ ಕೊಂಡಿಯಾಗಿ ಗುರುತಿಸಿಕೊಂಡಿದ್ದರು.ಆಚಾರ್ ಅವರು ಸೋಮವಾರ ಮಾರಣಕಟ್ಟೆಯಲ್ಲಿ ಯಕ್ಷಗಾನ ಮುಗಿಸಿ ಮಂಗಳೂರಿಗೆ ಬಂದಿದ್ದರು. ಮಂಗಳೂರಿನ ಕುಲಶೇಖರದ ಸ್ನೇಹಿತನ ಮನೆಯಲ್ಲಿ ವಿಷ ಸೇವಿಸಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಮಂಗಳೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.Sign in to your account
Username or Email Address


Password

 Remember Me


