ಬೆಂಗಳೂರು: ದಿನದಿಂದ ದಿನಕ್ಕೆ ಹೈಟೆಕ್ ವೇಶ್ಯಾವಾಟಿಕೆಗಳು ಹೆಚ್ಚಾಗುತ್ತಿದ್ದಾವೆ. ಒಂದು ದಿನ ಸ್ಪಾ, ಇನ್ನೊಂದು ದಿನ ಮಸಾಜ್ ಪಾರ್ಲರ್ ಮತ್ತೊಂದು ದಿನ ಅಪಾರ್ಟ್‌ಮೆಂಟ್‍ನಲ್ಲೂ ವೇಶ್ಯಾವಾಟಿಕೆ ನಡೆಯುತ್ತಿರುವುದು ಕಂಡು ಬಂದಿದೆ.ಹೌದು. ಅಪಾರ್ಟ್‌ಮೆಂಟ್‍ಗಳಲ್ಲೂ ಕೂಡ ಯಾರಿಗೂ ಅನುಮಾನ ಬಾರದಂತೆ ಹೈಟೆಕ್ ವೇಶ್ಯಾವಾಟಿಕೆಗಳನ್ನು ನಡೆಸುತ್ತಿದ್ದಾರೆ. ಈ ಮಾಹಿತಿಯನ್ನು ಆಧರಿಸಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಗಳವಾರ ರಾತ್ರಿ ಬಾಣಸವಾಡಿಯ ಅಪಾರ್ಟ್‌ಮೆಂಟ್‌ ಮೇಲೆ ದಾಳಿ ನಡೆಸಿದ ಸಿಸಿಬಿ ಅಧಿಕಾರಿಗಳು ಮೂವರು ಯುವತಿಯರನ್ನು ರಕ್ಷಿಸಿದ್ದಾರೆ.ಮೂವರು ಕೂಡ ಹೊರ ರಾಜ್ಯದ ಯವತಿಯರು ಎಂದು ತಿಳಿದು ಬಂದಿದೆ. ಅಪಾರ್ಟ್‌ಮೆಂಟ್‌ನ ಮಾಲೀಕ ಕೂಡ ಈ ಹೈಟೆಕ್ ವೇಶ್ಯಾವಾಟಿಕೆಗೆ ಸಾಥ್ ನೀಡಿದ್ದನು. ಸದ್ಯಕ್ಕೆ ದಾಳಿ ನಡೆಸಿದಾಗ ಒಬ್ಬ ಆರೋಪಿ ಬಲೆಗೆ ಬಿದ್ದಿದ್ದು, ಮಾಲೀಕನ ಜೊತೆ ಸಾಕಷ್ಟು ಜನ ಪರಾರಿಯಾಗಿದ್ದಾರೆ. ಹೀಗಾಗಿ ಆರೋಪಿಗಳಿಗಾಗಿ ಸಿಸಿಬಿ ಅಧಿಕಾರಿಗಳು ಬಲೆ ಬೀಸಿದ್ದಾರೆ.Sign in to your account
Username or Email Address


Password

 Remember Me


