ಮಡಿಕೇರಿ: ಇತ್ತೀಚೆಗೆ ಕರ್ನಾಟಕ ಸ್ಪೋರ್ಟ್ಸ್ ಡಾನ್ಸ್ ಫೆಡರೇಷನ್, ನ್ಯಾಷನಲ್ ಡಾನ್ಸ್ ಚಾಂಪಿಯನ್‍ಶಿಪ್ ಅಸೋಸಿಯೇಶನ್ ವತಿಯಿಂದ ನಡೆದ ರಾಜ್ಯ ಮಟ್ಟದ ಕಿರಿಯರ ವಿಭಾಗದ ಭರತನಾಟ್ಯ ಸ್ಪರ್ಧೆಯಲ್ಲಿ ಕೊಡಗಿನ ಭೂಮಿಕಾ ಕಾವೇರಪ್ಪ ಹಾಗೂ ತನಿಷಾ ಕಾವೇರಪ್ಪ ಚಿನ್ನದ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದರೆ.ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಅಮ್ಮತಿ ಕಾವಡಿ ಗ್ರಾಮದ ಪುಟಾಣಿಗಳು ಕುಟ್ಟಂಡ ನಂದ ಅಪ್ಪಯ್ಯ ಅವರ ಮೊಮ್ಮಕ್ಕಳಾಗಿದ್ದು, ಪುಟ್ಟ ವಯಸ್ಸಿನಿಂದಲೂ ಭರತನಾಟ್ಯದಲ್ಲಿ ಹೆಚ್ಚು ಆಸಕ್ತಿಯಿಂದ ಅಭ್ಯಾಸ ಮಾಡಿದ್ದಾರೆ. ಅಮ್ಮತಿ ಗ್ರಾಮದ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ಗುರು ವಿಧೂಷಿ ಹೇಮಾವತಿ ಕಾಂತರಾಜ್ ಅವರಲ್ಲಿ ಶಿಕ್ಷಣ ಪಡೆದಿದ್ದಾರೆ. ತಮ್ಮ ಗ್ರಾಮದ ಪುಟಾಣಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿರುವುದಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.Sign in to your account
Username or Email Address


Password

 Remember Me


