ದಾವಣಗೆರೆ: ಸ್ಮಾರ್ಟ್ ಸಿಟಿ ಯೋಜನೆ ಅಡಿ ಆಯ್ಕೆಯಾಗಿರುವ ದಾವಣಗೆರೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿವೆ. ಇದರ ಜೊತೆ ಪರಿಸರ ಮಾಲೀನ್ಯದ ಕಡೆ ಗಮನ ಹರಿಸಿದ್ದು, ಅದೇ ಈಗ ಸಾವಿರಾರು ಕುಟುಂಬಗಳಿಗೆ ಮುಳ್ಳಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ದಾವಣಗೆರೆಯಲ್ಲಿ 12 ಸಾವಿರಕ್ಕೂ ಹೆಚ್ಚು ಆಟೋರಿಕ್ಷಾಗಳು ಸಾರ್ವಜನಿಕ ಸೇವೆ ನೀಡುವ ಜೊತೆಗೆ ಅಷ್ಟೇ ಕುಟುಂಬಗಳ ಜೀವನಕ್ಕೆ ಆಧಾರವಾಗಿವೆ. ಅದರಲ್ಲೂ ಸಾವಿರ ಆಟೋರಿಕ್ಷಾಗಳಲ್ಲಿ ಬಹುತೇಕ ಆಟೋಗಳು ಗ್ಯಾಸ್ ಚಾಲಿತ ವಾಹನಗಳಾಗಿ ಪರಿವರ್ತನೆಗೊಂಡಿವೆ. ಉಳಿದ ಸಾವಿರಾರು ಆಟೋರಿಕ್ಷಾಗಳು ಪೆಟ್ರೋಲ್ ಹಾಗೂ ಡೀಸೆಲ್‍ನಿಂದ ಓಡುತ್ತಿವೆ. ಆದರೆ ಈಗ ಸ್ಮಾರ್ಟಿ ಸಿಟಿ ಯೋಜನೆ ಅಡಿ ಪೆಟ್ರೋಲ್ ಹಾಗೂ ಡಿಸೇಲ್ ಆಟೋರಿಕ್ಷಾಗಳು ಬ್ಯಾನ್ ಮಾಡುವ ಆಲೋಚನೆಯನ್ನು ಮಾಡಿದ್ದಾರೆ. ಇಲ್ಲವಾದರೆ ಈಗಿರುವ ಆಟೋರಿಕ್ಷಾಗಳು ಗ್ಯಾಸ್ ಚಾಲಿತ ವಾಹನಗಳಾಗಿ ಪರಿವರ್ತನೆ ಆಗಬೇಕು. ಆಗದಿದ್ದರೆ ನಗರದಲ್ಲಿ ಚಾಲನೆಗೆ ಅವಕಾಶ ರದ್ದು ಪಡಿಸುವ ಸಾಧ್ಯತೆಗಳು ಹೆಚ್ಚಾಗಿವೆ.ಎಲೆಕ್ಟ್ರಾನಿಕ್ ಆಟೋಗಳನ್ನು ಸ್ಮಾರ್ಟಿ ಸಿಟಿ ಯೋಜನೆಯಲ್ಲಿ ಬಿಡುಗಡೆಯಾಗಿದ್ದು, ಅವುಗಳನ್ನೇ ಚಾಲನೆ ಮಾಡಬೇಕು. ಅವುಗಳನ್ನು ರಿಯಾಯಿತಿ ದರದಲ್ಲಿ ನೀಡಬೇಕು ಎನ್ನುವ ಆಲೋಚನೆಯನ್ನು ಅಧಿಕಾರಿಗಳು ಮಾಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.ಈಗಾಗಲೇ ಡೀಸೆಲ್ ಚಾಲಿತ ಆಟೋರಿಕ್ಷಾಗಳ ನೋಂದಣಿ ರದ್ದುಗೊಳಿಸಲಾಗಿದೆ. ನಗರದಲ್ಲಿ ಕೇವಲ ಸಿಎನ್‍ಜಿ ಅಥವಾ ಎಲ್‍ಪಿಜಿ ಗ್ಯಾಸ್ ಅಥವಾ ವಿದ್ಯುತ್ ಚಾಲಿತ ಆಟೋರಿಕ್ಷಾಗಳಿಗೆ ಮಾತ್ರ ಆವಕಾಶ ನೀಡಲಾಗಿದೆ. ಪರಿವರ್ತನೆಗೆ ಹೊಂದಿಕೊಳ್ಳದ ಡೀಸೆಲ್ ಆಟೋರಿಕ್ಷಾಗಳನ್ನು ದಾವಣಗೆರೆ ಕಾರ್ಪೋರೇಷನ್ ವ್ಯಾಪ್ತಿಯಿಂದ ಹೊರಗೆ ಹಾಕಲಾಗುವುದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ ಎನ್ನಲಾಗಿದೆ.ಆಟೋರಿಕ್ಷಾ ನಂಬಿಕೊಂಡು ಜೀವನ ನಡೆಸುತ್ತಿರುವವರಿಗೆ ಅನ್ಯಾಯವಾಗುತ್ತದೆ. ಅಲ್ಲದೆ ಎಲೆಕ್ಟ್ರಾನಿಕ್ ಆಟೋಗಳನ್ನು ಖರೀಸಿದಲು ಬಡ ಆಟೋ ಚಾಲಕರಿಗೆ ಹೊರೆಯಾಗುತ್ತಿದೆ. ಹೀಗಾಗಿ ಅವರಿಗೆ ಹೊರೆಯಾಗದಂತೆ ಯೋಜನೆ ರೂಪಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.Sign in to your account
Username or Email Address


Password

 Remember Me


