ತುಮಕೂರು: ಜೆಎನ್‍ಯು ನಲ್ಲಿ ದೇಶದ್ರೋಹಿಗಳೇ ತುಂಬಿದ್ದಾರೆ. ಕಾಂಗ್ರೆಸ್ ಮತ್ತು ಕಮ್ಯುನಿಷ್ಟರು ದೇಶ ದ್ರೋಹಿಗಳನ್ನು ಅಲ್ಲಿ ಹುಟ್ಟುಹಾಕುತ್ತಿದ್ದಾರೆ ಎಂದು ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಪ್ರತಿಕ್ರಿಯಿಸಿದ್ದಾರೆ.ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಎನ್‍ಯುನಲ್ಲಿ ದೇಶ ದ್ರೋಹಿ ಚಟುವಟಿಕೆ ನಡೆಯುತ್ತಿದೆ ಎಂದು ಆ ವಿಶ್ವವಿದ್ಯಾನಿಲಯವನ್ನು ಬಂದ್ ಮಾಡೋದು ಬೇಡ. ಅಲ್ಲಿಯ ವಿದ್ಯಾರ್ಥಿಗಳಲ್ಲಿ ಪ್ರೀತಿ-ವಿಶ್ವಾಸದಿಂದ ರಾಷ್ಟ್ರೀಯವಾದವನ್ನು ತುಂಬಬೇಕು. ಆ ಮೂಲಕ ಸತ್ಯ ದರ್ಶನ ಮಾಡಿಸಬೇಕು ಎಂದು ಅಭಿಪ್ರಾಯಪಟ್ಟರು.ಅಲ್ಲದೇ ಎನ್.ಆರ್.ಸಿ ಮತ್ತು ಪೌರತ್ವ ಕಾಯ್ದೆ ದೇಶಾದ್ಯಂತ ಜಾರಿ ಆಗಲೇಬೇಕು. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ತುಂಬಾ ಬಲವಾಗಿದ್ದಾರೆ. ಇದನ್ನು ಮಾಡೇ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪೌರತ್ವ ಕಾಯ್ದೆ ಹಾಗೂ ಎನ್.ಆರ್.ಸಿಯನ್ನು ಯಾವುದೇ ರಾಜ್ಯ ತಿರಸ್ಕರಿಸುವಂತಿಲ್ಲ. ಆ ಅಧಿಕಾರ ರಾಜ್ಯಕ್ಕಿಲ್ಲ ಎಂದರು.Sign in to your account
Username or Email Address


Password

 Remember Me


