ಮಂಡ್ಯ: ವ್ಯಕ್ತಿಯೊಬ್ಬ ಜೇಬಿನಲ್ಲಿ 1.20 ಲಕ್ಷ ರೂ. ಹಣವನ್ನು ಜೇಬಿನಲ್ಲಿ ಇಟ್ಟುಕೊಂಡು ರೈಲು ಹತ್ತುವ ವೇಳೆ ಜೇಬಿನಲ್ಲಿ ಇದ್ದ ಹಣ ಕಳವಾಗಿರುವ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ಜರುಗಿದೆ.ಬೊಮ್ಮನಹಳ್ಳಿಯ ರಾಮು ಅವರು 1.20 ಲಕ್ಷ ರೂ.ಗಳನ್ನು ತಮ್ಮ ಬೇಬಿನಲ್ಲಿ ಇಟ್ಟುಕೊಂಡು ರಾಮನಗರಕ್ಕೆ ತೆರಳಲು ಮಂಡ್ಯ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ಮಧ್ಯಾಹ್ನ 1:30ರ ಸುಮಾರಿಗೆ ಮೆಮೋ ರೈಲು ಆಗಮಿಸಿದ್ದು, ಈ ವೇಳೆ ರಾಮು ರೈಲು ಹತ್ತಲು ಮುಂದಾಗಿದ್ದರು.ರೈಲು ಹತ್ತಿದ ಬಳಿಕ ರಾಮು ಅವರು ಜೇಬನ್ನು ನೋಡಿಕೊಂಡಾಗ ಹಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ರೈಲು ಹತ್ತುವ ವೇಳೆ ಜನ ಸಂದಣಿಯಲ್ಲಿ ಖದೀಮರು ರಾಮು ಅವರ ಜೇಬಿನಿಂದ ಹಣ ಎಗರಿಸಿದ್ದಾರೆ. ಸದ್ಯ ಈ ಘಟನೆ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Sign in to your account
Username or Email Address


Password

 Remember Me


