ಬೆಂಗಳೂರು: ಮಸಾಜ್ ಪಾರ್ಲರ್ ಹೆಸರಿನಲ್ಲಿ ಮಾಂಸದಂಧೆ ನಡೆಸುತ್ತಿದ್ದ ಸ್ಪಾಗಳ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಎಚ್‍ಎಎಲ್‍ನ ಈಸ್ಟರ್ನ್ ಸಲೂನ್ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಮೂವರು ದಲ್ಲಾಳಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಮೂವರು ಯವತಿಯರನ್ನು ರಕ್ಷಣೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಸಾಜ್ & ಸ್ಪಾ ಹೆಸರಿನಲ್ಲಿ ಹೈಟೆಕ್ ವೈಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು.ಸ್ಪಾ ಹೆಸರಿನಲ್ಲಿ ನಡೆಸಲಾಗುತ್ತಿದ್ದ ವೈಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ ನಡೆಸಿದರು. ಜೀವನ ಭೀಮಾನಗರ ಮತ್ತಿತರ ಕಡೆಯಲ್ಲಿ ದಾಳಿ ನಡೆಸಿದ್ದಾರೆ. ಮತ್ತೊಂದು ವಿಚಾರ ಏನೆಂದರೆ ದಾಳಿ ನಡೆಸಿದಾಗ ವೈಶ್ಯಾವಾಟಿಕೆ ನಡೆಸುತ್ತಿದ್ದ ಮನೆಯಲ್ಲಿ ಕಾರ್ಡ್ ಸೈಪಿಂಗ್ ಮೆಷಿನ್ ಸಿಕ್ಕಿದ್ದು, ಮನೆಗೆ ಬರುತ್ತಿದ್ದ ಗಿರಾಕಿಗಳ ಬಳಿ ಹಣ ಇಲ್ಲದೆ ಹೋದರೆ ಅವರು ಕಾರ್ಡ್ ಅನ್ನು ಸೈಪ್ ಮಾಡಬಹುದಿತ್ತು.ಈ ಹೈಟೆಕ್ ವೇಶ್ಯಾವಾಟಿಕೆ ದಂಧೆಯಲ್ಲಿ ಸಿಕ್ಕಿಂ ಮತ್ತು ನಾಗಾಲ್ಯಾಂಡ್‍ನ ಯುವತಿಯರನ್ನು ಬಳಸಿಕೊಂಡಿದ್ದು ಬೆಳಕಿಗೆ ಬಂದಿದೆ. ಗಿರಾಕಿಗಳನ್ನು ಆನ್‍ಲೈನ್ ಅಲ್ಲಿ ಸೆಳೆದುಕೊಳ್ಳುತ್ತಾ ಇದ್ದಿದ್ದು ಅಲ್ಲದೇ, ಫೋಟೋಗಳನ್ನು ಖಾಸಗಿಯಾಗಿ ಮೊಬೈಲ್‍ಗೆ ಕಳುಹಿಸಿ ವ್ಯವಹಾರ ಕುದುರಿಸುತ್ತಿದ್ದದ್ದೂ ಕೂಡ ತನಿಖೆಯಲ್ಲಿ ತಿಳಿದು ಬಂದಿದೆ.Sign in to your account
Username or Email Address


Password

 Remember Me


