ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ವಿಧಾನಸೌಧದ ಆವರಣದಲ್ಲಿ ಕೆಎಸ್ಆರ್‌ಟಿಸಿ ಹಾಗೂ ಬಿಎಂಟಿಸಿಯ ವಿವಿಧ ಮಾದರಿಯ ನೂತನ ಬಸ್ಸುಗಳಿಗೆ ಚಾಲನೆ ನೀಡಿದರು.ಸಿಎಂ ಬಿ.ಎಸ್.ಯಡಿಯೂರಪ್ಪ ಬಾವುಟ ತೋರಿಸುವುದರ ಮೂಲಕ ಹೊಸ ಬಸ್ಸುಗಳಿಗೆ ಹಸಿರು ನಿಶಾನೆ ತೋರಿಸಿದರು. ಕೆಎಸ್ಆರ್‌ಟಿಸಿಯ ವಿವಿಧ ಮಾದರಿಯ ಬಸ್‍ಗಳಾದ ಅಂಬಾರಿ ಡ್ರೀಮ್ ಕ್ಲಾಸ್- 5, ಐರಾವತ ಕ್ಲಾಸ್- 3, ಐರಾವತ- 4, ನಾನ್ ಎಸಿ ಸ್ಲೀಪರ್- 01, ರಾಜಹಂಸ- 2, ಕರ್ನಾಟಕ ಸಾರಿಗೆ – 5, ಸೇರಿದಂತೆ ಒಟ್ಟು 20 ಬಸ್‍ಗಳು ಇಂದು ಲೋಕಾರ್ಪಣೆಗೊಂಡವು.ಈ ವೇಳೆ ಬೆಂಗಳೂರು ಮತ್ತು ಶಿಕಾರಿಪುರ ಮಾರ್ಗದ ಹೊಸ ಬಸ್ಸಿನಲ್ಲಿ ಸಿಎಂ ಯಡಿಯೂರಪ್ಪ ಪ್ರಯಾಣಿಸಿದರು. ವಿಧಾನಸೌಧದ ಆವರಣದಿಂದ ಹೊಸ ಬಸ್‍ನಲ್ಲಿ ಕೂತು ಸ್ವಲ್ಪ ದೂರ ಪ್ರಯಾಣಿಸಿ ಸಿಎಂ ಸಂತಸಗೊಂಡರು. ಈ ಸಂದರ್ಭದಲ್ಲಿ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಹಾಜರಿದ್ದರು.ಮುಖ್ಯಮಂತ್ರಿ ಶ್ರೀ @BSYBJP ಅವರು ಇಂದು ವಿಧಾನಸೌಧದ ಆವರಣದಲ್ಲಿ ಕೆಎಸ್ಆರ್ ಟಿಸಿಯ ವಿವಿಧ ಮಾದರಿಯ ನೂತನ ಬಸ್ಸುಗಳಿಗೆ ಚಾಲನೆ ನೀಡಿದರು. ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ ಶಿಖಾ ಉಪಸ್ಥಿತರಿದ್ದರು. pic.twitter.com/nSamVEDded— CM of Karnataka (@CMofKarnataka) January 7, 2020






 Advertisement 




Sign in to your account
Username or Email Address


Password

 Remember Me


