ಶಿವಮೊಗ್ಗ: ಕಾಂಗ್ರಸ್ ಪಕ್ಷ ಅಧಿಕಾರ ಕಳೆದುಕೊಂಡಾಗೆಲ್ಲಾ ಅಮಾಯಕರ ಕೈಗೆ ಕಲ್ಲು ಕೊಡುವ ಕೆಲಸ ಮಾಡಿದೆ. ದೇಶದ ಆಸ್ತಿಪಾಸ್ತಿಗೆ ಬೆಂಕಿ ಹಚ್ಚಿ ದೇಶವನ್ನು ನಾಶ ಮಾಡುವ ಕೆಲಸಕ್ಕೆ ಕೈ ಹಾಕಿದೆ ಎಂದು ಕುಡಚಿ ಶಾಸಕ ಪಿ. ರಾಜೀವ್ ಗಂಭೀರ ಆರೋಪ ಮಾಡಿದ್ದಾರೆ.ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಹಿನ್ನೆಲೆಯಲ್ಲಿ ನಗರದ ಛೇಂಬರ್ಸ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಪ್ರಬುದ್ಧರ ಜೊತೆ ಸಂವಾದ ಸಭೆಯಲ್ಲಿ ಪಿ. ರಾಜೀವ್ ಅವರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡಾಗೆಲ್ಲಾ ಅಮಾಯಕರ ಕೈಗೆ ಕಲ್ಲು ಕೊಡುವ ಕೆಲಸ ಮಾಡಿದೆ. ದೇಶದ ಆಸ್ತಿಪಾಸ್ತಿಗೆ ಬೆಂಕಿ ಹಚ್ಚಿ ದೇಶವನ್ನು ನಾಶ ಮಾಡುವ ಕೆಲಸಕ್ಕೆ ಕೈ ಹಾಕಿದೆ ಎಂದು ಕಿಡಿಕಾರಿದರು.ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ರಿಗೆ ಭಾರತ ದೇಶ ಅಂದರೆ ಸ್ವಾರ್ಥಕ್ಕಾಗಿ ಉಪಯೋಗಿಸುವ ಒಂದು ವಸ್ತುವಾಗಿದೆ. ಈ ಎರಡು ಪಕ್ಷಗಳು ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡುತ್ತವೆ. ಆದರೆ ಬಿಜೆಪಿ ಪಕ್ಷಕ್ಕೆ, ಬಿಜೆಪಿ ಕಾರ್ಯಕರ್ತರಿಗೆ ಭಾರತ ಅಂದರೆ ಸ್ವಾರ್ಥಕ್ಕಾಗಿ ಬಳಸುವ ವಸ್ತುವಲ್ಲ. ಬದಲಿಗೆ ಬಿಜೆಪಿ ಪಾಲಿಗೆ ಭಾರತ ದೇಶ ಪುಣ್ಯ ಭೂಮಿ, ಶ್ರದ್ಧಾ ಭೂಮಿ ಆಗಿದೆ ಎಂದರು.ರಾಷ್ಟ್ರದ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದ್ದಾರೆ. ಈ ಬಗ್ಗೆ ಕೆಲವು ಸ್ವಾರ್ಥಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ನಾವು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಮ್ಮ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕಾಯ್ದೆ ಬಗ್ಗೆ ಇರುವ ಗೊಂದಲ ನಿವಾರಿಸುವ ಕೆಲಸ ಮಾಡಿ ಎಂದು ಶಾಸಕ ರಾಜೀವ್ ಕರೆ ಕೊಟ್ಟರು.Sign in to your account
Username or Email Address


Password

 Remember Me


