ಚಿಕ್ಕಮಗಳೂರು: ಪೊಲೀಸ್ ಠಾಣೆಗೆ ಬಂದ ಕೋತಿಯೊಂದು ಪೊಲೀಸರಿಗೆ ತಲೆ ನೋವಾದ ಘಟನೆ ಚಿಕ್ಕಮಗಳೂರಿನ ತರೀಕೆರೆಯಲ್ಲಿ ನಡೆದಿದೆ.ಜಿಲ್ಲೆಯ ತರೀಕೆರೆ ಠಾಣೆಗೆ ಸೋಮವಾರ ಏಕಾಏಕಿ ಕೋತಿಯೊಂದು ಎಂಟ್ರಿ ಕೊಟ್ಟಿದೆ. ಠಾಣೆಗೆ ಭೇಟಿ ಕೊಟ್ಟ ಕಪಿರಾಯ ಪೊಲೀಸರಿಗೆ ತಲೆ ನೋವು ತರಿಸಿತ್ತು. ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಹಾರಾಡುತ್ತಾ ಕೊನೆಗೆ ಹೋಗಿ ದೇವರ ಫೋಟೋ ಬಳಿ ಕುಳಿಯಿತು. ಕೋತಿ ದೇವರ ಫೋಟೋ ಬಳಿ ಕೂತುಕೊಂಡಿದ್ದಕ್ಕೆ ಎಲ್ಲರೂ ಸುಮ್ಮನಾದರು.ಠಾಣೆಯೊಳಗೆ ಬಂದ ಕೋತಿ ಓಡಾಡುವುದನ್ನು ನೋಡಿದ ಸಿಬ್ಬಂದಿಗೆ ಕೆಲಕಾಲ ತಲೆ ನೋವಾಯಿತು. ಕೋತಿ ಟೇಬಲ್ ಮೇಲೆ ಹೋಗಿ ಕುಳಿತುಕೊಳ್ಳುತ್ತಿದ್ದಂತೆ ಟೋಪಿ ಎತ್ತುಕೊಂಡು ಹೋಗುತ್ತೆ ಎಂದು ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದರು.ಕೋತಿ ಹೋಗೆ ಅಲ್ಲಿಂದ ಇಲ್ಲಿಗೆ ಓಡಾಡಿ ಕೊನೆಗೆ ದೇವರ ಫೋಟೋ ಬಳಿ ಕುಳಿತುಕೊಂಡಿತ್ತು. ಸ್ವಲ್ಪ ಹೊತ್ತು ಅಲ್ಲಿ ಕೂತ ಬಳಿಕ ಕೋತಿ ತಾನಾಗೇ ಹೊರಗೆ ಹೋಯಿತು. ಕೋತಿ ಹೊರ ಹೋಗುವುದನ್ನು ನೋಡಿದ ಪೊಲೀಸರು ನಿಟ್ಟುಸಿರು ಬಿಟ್ಟರು.Sign in to your account
Username or Email Address


Password

 Remember Me


