ಬೆಂಗಳೂರು: ಕೆಲ ರೌಡಿಶೀಟರ್‌ಗಳು ಬಾಡಿಗೆಗೆ ತೆಗೆದುಕೊಂಡು ಬಂದಿದ್ದ ಬೌನ್ಸ್ ಸ್ಕೂಟಿಗೆ ಬೆಂಕಿ ಹಚ್ಚಿ ಸುಟ್ಟ ಹಾಕಿ ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನ ಯಲಹಂಕದ ಕೋಗಿಲು ಕ್ರಾಸ್ ಬಳಿ ನಡೆದಿದೆ.ಈ ಪುಂಡರು ಸ್ಕೂಟಿಯನ್ನು ಸುಟ್ಟು ಹಾಕಿರುವ ವಿಡಿಯೋ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಡಿಸೆಂಬರ್ 26ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸ್ಕೂಟಿಗಳಿಗೆ ಬೆಂಕಿ ಹಾಕಿರುವ ವ್ಯಕ್ತಿಗಳು ರೌಡಿಶೀಟರ್‌ಗಳು ಎನ್ನುವ ವಿಚಾರ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.ರೌಡಿಶೀಟರ್‌ಗಳು ಡಿಯೋ ಹಾಗೂ ಬೌನ್ಸ್ ಸ್ಕೂಟಿಗಳಲ್ಲಿ ಜೊತೆ ಜೊತೆಯಲ್ಲೇ ಹೋಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆದರೆ ಈ ದೃಶ್ಯ ಸೆರೆಯಾದ ಐದೇ ನಿಮಿಷದಲ್ಲಿ ಡಿಯೋ ಸ್ಕೂಟಿಯಲ್ಲಿ ಮಾತ್ರ ಪುಂಡರು ವಾಪಸ್ ಬಂದಿದ್ದಾರೆ. ಬೌನ್ಸ್ ಸ್ಕೂಟಿಗೆ ನಿರ್ಮಾಣ ಹಂತದ ಕಟ್ಟಡದ ಬಳಿ ಬೆಂಕಿ ಹಚ್ಚಿ ಸುಟ್ಟು ಪುಂಡರು ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಧಗಧಗ ಉರಿಯುತ್ತಿರೋ ಬೌನ್ಸ್ ಸ್ಕೂಟಿಯ ಬೆಂಕಿಯ ಬೆಳಕು ನಿರ್ಮಾಣ ಹಂತದ ಕಟ್ಟಡದಲ್ಲಿ ಕಾಣಿಸಿಕೊಳ್ಳುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ. ಕೃತ್ಯವೆಸೆಗಿದ ಬಳಿಕ ರೌಡಿಶೀಟರ್‌ಗಳು ಒಂದೇ ಸ್ಕೂಟಿಯಲ್ಲಿ ಪರಾರಿಯಾಗೋಕೆ ಹೋಗುತ್ತಾರೆ. ಆದರೆ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ನೋಡ್ತಿದ್ದಂತೆ ಸ್ಕೂಟಿನ ಇನ್ನೊಂದು ಮಾರ್ಗದಲ್ಲಿ ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ. ಸದ್ಯ ಯಲಹಂಕ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.Sign in to your account
Username or Email Address


Password

 Remember Me


