ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರಲ್ಲಿ ಪ್ರತಿವಾರವೂ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗಿ ಮನೆಯಿಂದ ಹೊರ ಹೋಗುತ್ತಾರೆ. ಆದರೆ 13ನೇ ವಾರ ಎಲಿಮಿನೇಷನ್ ಇಲ್ಲ. ಆದರೂ ಈ ವಾರ ಬಿಗ್ ಮನೆಯಿಂದ ಹೊರ ಹೋಗಲು ನಾಲ್ವರು ನಾಮಿನೇಟ್ ಆಗಿದ್ದಾರೆ.ಮನೆಯ ಸದಸ್ಯರ ಅನುಸಾರ ದೀಪಿಕಾ ದಾಸ್, ಭೂಮಿ ಶೆಟ್ಟಿ, ಪ್ರಿಯಾಂಕಾ ಮತ್ತು ಚಂದನ್ ಆಚಾರ್ ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ. ಆದರೆ ಇವರಲ್ಲಿ ಒಬ್ಬ ಸ್ಪರ್ಧಿಯೂ ಮನೆಯಿಂದ ಹೋಗಲ್ಲ. ಯಾಕೆಂದರೆ ಈ ವಾರ ಎಲಿಮಿನೇಷನ್ ಇಲ್ಲ. ಆದರೆ ಮುಂದಿನ ವಾರ ಡಬಲ್ ಎಲಿಮಿನೇಷನ್ ಇದೆ. ಹಾಗಾಗಿ ಈ ವಾರ ಯಾರನ್ನೂ ಮನೆಯಿಂದ ಕಳುಹಿಸಲ್ಲ.ಬಿಗ್‍ಬಾಸ್ ಸ್ಪರ್ಧಿಗಳ ಮನಸ್ಥಿತಿಯನ್ನು ತಿಳಿದುಕೊಳ್ಳಲು ನಾಮಿನೇಷನ್ ಪ್ರಕ್ರಿಯೆ ಮಾಡಿದ್ದಾರೆ. ಈ ವಿಚಾರ ಮನೆಯ ಸದಸ್ಯರಿಗೆ ಗೊತ್ತಿಲ್ಲ. ಚಂದನಾ ಮನೆಯಿಂದ ಹೊರ ಹೋಗುವಾಗ ಪ್ರಿಯಾಂಕಾರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಇನ್ನೂ ಕ್ಯಾಪ್ಟನ್ ಕಿಶನ್ ಹಾಗೂ ಕಳೆದ ವಾರವೇ ಮುಂದಿನ ವಾರಕ್ಕೆ ಇಮ್ಯುನಿಟಿ ಪಡೆದಿರುವ ಕುರಿ ಪ್ರತಾಪ್, ವಾಸುಕಿ ವೈಭವ್‍ರನ್ನು ಮನೆಯ ಸದಸ್ಯರು ನಾಮಿನೇಟ್ ಮಾಡುವಂತಿರಲಿಲ್ಲ. ಕೊನೆಗೆ ಮನೆಯ ಸದಸ್ಯರು ಈ ವಾರ ದೀಪಿಕಾ ದಾಸ್, ಭೂಮಿ ಶೆಟ್ಟಿ, ಚಂದನ್ ಆಚಾರ್ ಮತ್ತು ಹರೀಶ್ ರಾಜ್ ನಾಲ್ವರನ್ನು ಮನೆಯಿಂದ ಹೊರ ಹೋಗಲು ನಾಮಿನೇಟ್ ಮಾಡಿದ್ದರು.ಆಗ ಬಿಗ್‍ಬಾಸ್ ಮನೆಯ ಕ್ಯಾಪ್ಟನ್ ಆಗಿರುವ ಕಿಶನ್‍ಗೆ ಒಂದು ವಿಶೇಷ ಅವಕಾಶವನ್ನು ಕೊಟ್ಟಿದ್ದರು. ಅದೇನೆಂದರೆ ನಾಮಿನೇಟ್ ಆಗಿರುವ ಒಬ್ಬರನ್ನು ಸೇಫ್ ಮಾಡುವ ಅವಕಾಶವನ್ನು ಬಿಗ್‍ಬಾಸ್ ಕೊಟ್ಟಿದ್ದರು. ಅದರಂತೆ ಕಿಶನ್, ಹರೀಶ್ ರಾಜ್ ಅವರನ್ನು ಸೇಫ್ ಮಾಡಿದ್ದಾರೆ. ಕೊನೆಯಲ್ಲಿ ಈ ವಾರ ದೀಪಿಕಾ ದಾಸ್, ಭೂಮಿ ಶೆಟ್ಟಿ, ಚಂದನ್ ಆಚಾರ್ ಹಾಗೂ ಪ್ರಿಯಾಂಕಾ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಈ ವಾರ ಯಾರೂ ಮನೆಯಿಂದ ಹೊರ ಹೋಗುವುದಿಲ್ಲ. ಆದರೆ ಮುಂದಿನ ವಾರ ಡಬಲ್ ಎಲಿಮಿನೇಷನ್ ಇರುತ್ತದೆ.Sign in to your account
Username or Email Address


Password

 Remember Me


