ಮಂಗಳೂರು: ಬೈಕಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿದ್ದ ದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡುವಿನ ಮುಳ್ಳೇರಿಯಾ ಸಮೀಪ ಕಾರಡ್ಕದಲ್ಲಿ ನಡೆದಿದೆ.ಗೋವಿಂದರಾಜ್ (53) ಹಾಗೂ ಪತ್ನಿ ಉಮಾವತಿ (46) ಸ್ಥಳದಲ್ಲೇ ಮೃತಪಟ್ಟ ದಂಪತಿ. ಮೃತ ದಂಪತಿ ಮೂಲತಃ ತಮಿಳುನಾಡಿನವರಾಗಿದ್ದು, ಮುಳ್ಳೇರಿಯಾದ ಕಾರಡ್ಕದಲ್ಲಿ ವಾಸವಾಗಿದ್ದರು. ಮುಳ್ಳೇರಿಯಾದಲ್ಲಿ ಗೋವಿಂದರಾಜ್ ಸೆಲೂನ್ ವೃತ್ತಿ ನಡೆಸುತ್ತಿದ್ದರು.ಸೋಮವಾರ ಗೋವಿಂದರಾಜ್ ತಮ್ಮ ಪತ್ನಿಯೊಂದಿಗೆ ಬೈಕ್‍ನಲ್ಲಿ ಹೋಗುತ್ತಿದ್ದಾಗ ಮುಳ್ಳೇರಿಯಾ ಸಮೀಪ ಕಾರಡ್ಕದಲ್ಲಿ ಎದುರಿನಿಂದ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ದಂಪತಿ ದೂರಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲಿಯೇ ದಂಪತಿ ಮೃತಪಟ್ಟಿದ್ದಾರೆ.ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಅದೂರು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


