ಬೆಂಗಳೂರು: ಬಿಗ್ ಬಾಸ್ ಸೀಸನ್-7ರಲ್ಲಿ ಹೊಸ ಸ್ಪರ್ಧಿಯೊಬ್ಬರು ಎಂಟ್ರಿ ಕೊಟ್ಟಿದ್ದಾರೆ.ಬಿಗ್ ಬಾಸ್ ಮನೆಗೆ ಶೇಷಮ್ಮ ಎಂಬವರು ಎಂಟ್ರಿ ಕೊಟ್ಟಿದ್ದಾರೆ. ಸ್ಪರ್ಧಿ ಹರೀಶ್ ರಾಜ್ ಅವರು ಮಹಿಳೆಯಂತೆ ಸೀರೆ ಧರಿಸಿ, ಮೇಕಪ್ ಮಾಡಿಕೊಂಡಿದ್ದರು. ಅಲ್ಲದೆ ಮಹಿಳೆಯಂತೆ ಮಾತನಾಡುವ ಮೂಲಕ ಮನೆ ಮಂದಿಗೆ ಮನರಂಜನೆ ನೀಡಿದ್ದಾರೆ. ಪ್ರಿಯಾಂಕಾ ಅವರು ಹರೀಶ್‍ಗೆ ತಮ್ಮ ಸೀರೆಯನ್ನೇ ಉಡಿಸಿದ್ದಾರೆ. ಸದ್ಯ ಮಹಿಳೆಯಂತೆ ವೇಷ ಧರಿಸಿದ ಬಳಿಕ ಶೇಷಮ್ಮ ನಾನು ಹರೀಶ್ ತಂಗಿ ಎಂದುಕೊಂಡು ಮನೆ ತುಂಬಾ ಓಡಾಡಿದ್ದಾರೆ.ಹರೀಶ್ ಅವರು ಮಹಿಳೆ ಸೀರೆ ಹಾಕಿರುವುದನ್ನು ನೋಡಿ ಸ್ಪರ್ಧಿಗಳು ಮೊದಲು ಬಿಗ್ ಬಾಸ್ ಟಾಸ್ಕ್ ನೀಡಿದ್ದಾರೆ ಎಂದುಕೊಂಡಿದ್ದರು. ಬಳಿಕ ಹರೀಶ್ ಮನರಂಜನೆಗಾಗಿ ಈ ರೀತಿ ಮಾಡಿದ್ದಾರೆ ಎಂಬುದು ಮನೆ ಮಂದಿಗೆ ತಿಳಿಯಿತು. ಹರೀಶ್ ಮಹಿಳೆಯಂತೆ ಮಾತನಾಡುವಾಗ ಗಾರ್ಡನ್ ಏರಿಯಾದಲ್ಲಿದ್ದ ಭೂಮಿ ಹಾಗೂ ವಾಸುಕಿ ಹೊಸ ಸ್ಪರ್ಧಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ ಎಂದುಕೊಂಡಿದ್ದರು. ಬಳಿಕ ಮನೆಯೊಳಗೆ ಬಂದು ನೋಡಿದಾಗ ಹರೀಶ್ ಅವರನ್ನು ನೋಡಿ ಶಾಕ್ ಆದರು.ಈ ಹಿಂದೆ ಕಳ್ಳ- ಪೊಲೀಸ್ ಟಾಸ್ಕ್ ನಲ್ಲಿ ಹರೀಶ್ ಶೇಷಪ್ಪ ಎಂಬ ಪಾತ್ರವನ್ನು ಹುಟ್ಟು ಹಾಕಿದ್ದರು. ಈ ವೇಳೆ ಅವರು ಹೋರಾಟಗಾರನಂತೆ ನಟಿಸಿದ್ದರು. ಇತ್ತೀಚೆಗೆ ಅವರು ಕ್ಯಾಪ್ಟನ್ ಆಗಿದ್ದಾಗ ತೆಲುಗು ರೆಡ್ಡಿಗಾರು ಎಂಬ ಪಾತ್ರವನ್ನು ಸೃಷ್ಟಿಸಿ ಅದರಂತೆ ನಟಿಸಿದ್ದರು. ಹರೀಶ್ ಪ್ರತಿ ಬಾರಿ ಹೊಸ ಪಾತ್ರವನ್ನು ಸೃಷ್ಟಿಸಿ ತಮ್ಮ ಟ್ಯಾಲೆಂಟ್ ಅನ್ನು ಹೊರ ಹಾಕುತ್ತಾರೆ. ಸದ್ಯ ಹರೀಶ್ ಅವರ ಶೇಷಮ್ಮ ಪಾತ್ರವನ್ನು ಮನೆಯವರು ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ.Sign in to your account
Username or Email Address


Password

 Remember Me


