ಮಂಗಳೂರು: ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಪ್ರಚಾರಕ್ಕಾಗಿ ನಾಯಕ ನಟ ರಕ್ಷಿತ್ ಶೆಟ್ಟಿ ಇಂದು ಮಂಗಳೂರಿಗೆ ಆಗಮಿಸಿದ್ದರು. ಮಂಗಳೂರಿನ ಸುಚಿತ್ರಾ ಥಿಯೇಟರಿಗೆ ಆಗಮಿಸಿದ ರಕ್ಷಿತ್ ಶೆಟ್ಟಿ, ಪ್ರೇಕ್ಷಕರನ್ನು ಭೇಟಿಯಾದರು.ತಮ್ಮ ಮಾತೃಭಾಷೆಯಾದ ತುಳುವಿನಲ್ಲೇ ಮಾತು ಆರಂಭಿಸಿದ ರಕ್ಷಿತ್ ಶೆಟ್ಟಿ, ಚಿತ್ರಕ್ಕೆ ಹೆಚ್ಚು ಪ್ರಚಾರ ನೀಡುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡಿದರು. ಇದೇ ವೇಳೆ ಚಿತ್ರ ಪ್ರೇಮಿಗಳು ರಕ್ಷಿತ್ ಜೊತೆ ಸೆಲ್ಫಿಗೆ ಮುಗಿಬಿದ್ದರು.ಬಳಿಕ ಮಾಧ್ಯಮದ ಜೊತೆ ಮಾತನಾಡಿದ ರಕ್ಷಿತ್ ಶೆಟ್ಟಿ, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ತೆಲುಗು, ತಮಿಳು, ಹಿಂದಿ, ಮಲಯಾಳಂ, ಕನ್ನಡ ಹೀಗೆ ಐದು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು ಹೆಮ್ಮೆ ಎನಿಸಿದೆ. ಜನರು ಹೆಚ್ಚು ಥಿಯೇಟರಿಗೆ ಆಗಮಿಸಿ ಚಿತ್ರ ನೋಡಬೇಕು. ಪೈರಸಿ ಕಾಟ ನಮ್ಮ ಚಿತ್ರಕ್ಕೂ ತಗುಲಿದ್ದು, ಅದನ್ನು ನೀಗಿಸಲು ಪೈರಸಿ ಟೀಂ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಈ ವೇಳೆ ಚಿತ್ರದ ನಿರ್ದೇಶಕರು ಮತ್ತು ನಾಯಕಿ ನಟಿ ಶಾನ್ವಿ ಜೊತೆಗಿದ್ದರು.Sign in to your account
Username or Email Address


Password

 Remember Me


