ತುಮಕೂರು: ಕಾಲೇಜು ವಿದ್ಯಾರ್ಥಿನಿಯರಿಬ್ಬರು ಬಸ್ ನಿಲ್ದಾಣದಲ್ಲೇ ಜಗಳ ಮಾಡಿಕೊಂಡು ಬಳಿಕೊಂಡು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ನಗರದ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.ಇಂದು ಮಧ್ಯಾಹ್ನ 3:30ರ ಸುಮಾರಿಗೆ ಘಟನೆ ನಡೆದಿದ್ದು, ಸಾರ್ವಜನಿಕ ಎದುರೇ ಜಗಳವಾಡಿ ಕೊನೆಗೆ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಜುಟ್ಟು ಹಿಡಿದುಕೊಂಡು ನೂಕಾಟ ತಳ್ಳಾಟ ಮಾಡಿಕೊಂಡು ಕಿತ್ತಾಟ ನಡೆಸಿದ್ದು, ಈ ದೃಶ್ಯಗಳು ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದೆ.ವಿಡಿಯೋ ವೈರಲ್: ವಿದ್ಯಾರ್ಥಿನಿಯರು ಜಗಳ ನಡೆಸುತ್ತಿರುವ ವಿಡಿಯೋವನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲದೇ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಹಾಗೂ ವಾಟ್ಸಾಪ್ ಗಳಲ್ಲಿ ಹರಿಬಿಟ್ಟಿದ್ದು, ಸಾಕಷ್ಟು ವೈರಲ್ ಆಗಿದೆ. ‘ಏನ್ ಗುರು ನಮ್ ತುಮಕೂರಲ್ಲಾ?, ನಾವಿದ್ದಾಗ ಇಂತಹದ್ಯಾವದೂ ಕಾಣಲಿಲ್ಲ.’ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ವಿಡಿಯೋ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ವಿದ್ಯಾರ್ಥಿನಿಯರು ಯಾವ ಕಾರಣಕ್ಕೆ ಜಗಳ ಮಾಡಿಕೊಂಡಿದ್ದಾರೆ ಎಂಬುವುದು ತಿಳಿದು ಬಂದಿಲ್ಲ. ವಿದ್ಯಾರ್ಥಿನಿರ ಜಗಳ ಕಂಡ ಕೆಲ ಹಿರಿಯರು ಇಬ್ಬರಿಗೂ ಬುದ್ಧಿವಾದ ಹೇಳಿ ಸ್ಥಳದಿಂದ ಕಳುಹಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇಬ್ಬರೂ ಒಂದೇ ಕಾಲೇಜು ವಿದ್ಯಾರ್ಥಿನಿಯರು ಎನ್ನಲಾಗಿದೆ.Sign in to your account
Username or Email Address


Password

 Remember Me


